ಸ್ಥಳೀಯ ಪ್ರತಿಭೆ ಗುರುತಿಸಿ: ಧರ್ಮಪ್ಪ ಸಲಹೆ

7

ಸ್ಥಳೀಯ ಪ್ರತಿಭೆ ಗುರುತಿಸಿ: ಧರ್ಮಪ್ಪ ಸಲಹೆ

Published:
Updated:

ಶನಿವಾರಸಂತೆ: ತ್ಯಾಗರಾಜ ಕಾಲೋನಿಯಲ್ಲಿ ಆದರ್ಶ ಯುವಕ ಸಂಘ ಹಾಗೂ ವಿನಾಯಕ ಸೇವಾ ಸಮಿತಿ ವತಿಯಿಂದ ಈಚೆಗೆ ನಡೆದ ಗಣೇಶೋತ್ಸವ ಪ್ರಯುಕ್ತ ಭದ್ರವತಿಯ ಡೈಮಂಡ್ ವಾಯ್ಸ ಅವರ ರಸಮಂಜರಿ ಹಮ್ಮಿಕೊಳ್ಳಲಾಗಿತ್ತು.ಅಂಗವೈಕಲ್ಯವಿರುವ ಯುವ ಕವಯಿತ್ರಿ ಎಂ.ಧಾತ್ರಿ ಅವರನ್ನು ಸನ್ಮಾನಿಸಿ, ಬಿನ್ನವತ್ತಳೆ ಅರ್ಪಿಸಲಾಯಿತು.

ಪಟ್ಟಣದ ಭಾರತಿ ವಿದ್ಯಾಸಂಸ್ಥೆ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ರಾದ ಎಂ.ನಾಗೇಶ್-ಗಾಯತ್ರಿ ದಂಪತಿ ಗಳ ಪುತ್ರಿ ಧಾತ್ರಿ ಅಂಗವೈಕಲ್ಯ ವನ್ನು ಮೆಟ್ಟಿನಿಂತು ತನ್ನ 7ನೇ ವಯಸ್ಸಿನಲ್ಲೆ ಕವನ ರಚನೆಯಲ್ಲಿ ತೊಡಗಿ,10ನೇ ವಯಸ್ಸಿಗೆ 80 ಕವನ ಗಳನ್ನು ರಚಿಸಿದ್ದು, ರಾಜ್ಯಮಟ್ಟದ ಪತ್ರಿಕೆಗಳಲ್ಲೂ ಪ್ರಕಟವಾಗಿದೆ.ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಸದಸ್ಯ ಡಿ.ಬಿ.ಧರ್ಮಪ್ಪ ಮಾತನಾಡಿ, ಗಣೇಶೋತ್ಸವ ಕಾರ್ಯಕ್ರಮದಡಿ ಸ್ಥಳೀಯ ಪ್ರತಿಭೆ ಗುರುತಿಸುವ ಮೂಲಕ ಆದರ್ಶ ಯುವಕ ಸಂಘ ಆದರ್ಶ ಮೆರೆದಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಎನ್.ರಘು ಮಾನಾಡಿ,ಒಗ್ಗಟ್ಟಿನಲ್ಲಿ ಬಲವಿದೆ. ಒಗ್ಗಟ್ಟಿನಿಂದ ಯಾವುದೇ ಕಾರ್ಯ ಸಾಧನೆ ಸಾಧ್ಯ.ಗಣೇಶೋತ್ಸವ ಭಾವೈ ಕ್ಯತೆಯ ಸಂಕೇತವಾಗಿದೆ ಎಂದರು.ಜಿಲ್ಲಾ ಪಂಚಾಯಿತಿ ಸದಸ್ಯೆ ಚಂದ್ರಿಕಾ, ತಾಲ್ಲೂಕು ಪಂಚಾಯಿತಿ ಸದಸ್ಯೆ ಸವಿತಾ ಹಾಗೂ ಪಿ.ಎಸ್.ಐ. ಮಹದೇವಯ್ಯ ಅವರು ಮಾತನಾಡಿದರು.ಗ್ರಾಮ ಪಂಚಾಯಿತಿ ಸದಸ್ಯರಾದ ಡಿ.ಎನ್.ರಾಜಶೇಖರ್,ಮಹ್ಮದ್‌ಪಾಶ, ಬಿ.ಎಸ್.ಮಂಜುನಾಥ್,ಉಪನ್ಯಾಸಕ ರಾದ ಎಂ.ನಾಗೇಶ್,ಗಾಯತ್ರಿ,ಆದರ್ಶ ಯುವಕ ಸಂಘದ ಅಧ್ಯಕ್ಷ ಮಧು, ಸದಸ್ಯರುಗಳು, ಪ್ರಮುಖರಾದ       ಎಸ್.ಜಿ.ನರೇಶ್ಚಂದ್ರ, ಕುಮಾರ್, ಗಿರಿ,ಮಂಜು ನಾಥ್ ಇತರರು ಇದ್ದರು.ವಿಘ್ನೇಶ್ವರ ಬಾಲಿಕಾ ಕಾಲೇಜಿನ ಶಿಕ್ಷಕ ಜಯಕುಮಾರ್ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry