ಸೋಮವಾರ, ಮೇ 10, 2021
20 °C
ಮರಳು ಗಣಿಗಾರಿಕೆ: ಸಾಮೂಹಿಕ ಹೋರಾಟಕ್ಕೆ ಕರೆ

ಸ್ಥಳೀಯ ಭಾಷೆ ಶಾಲೆಗಳಿಗೆ ಕುತ್ತು: ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಳಬಾಗಲು: ಕನ್ನಡ ಶಾಲೆಗಳಷ್ಟೇ ಅಲ್ಲದೆ ಇತರೆ ಭಾರತೀಯ ಬಾಷೆಗಳಾದ ಉರ್ದು. ತಮಿಳು, ತೆಲುಗು ಸರ್ಕಾರಿ ಪ್ರಾಥಮಿಕ ಶಾಲೆಗಳು ಕೂಡ ದುಃಸ್ಥಿತಿಯಲ್ಲಿವೆ ಎಂದು ಸಾಹಿತಿ ಕೆ.ರಾಜ್‌ಕುಮಾರ್ ಆತಂಕ ವ್ಯಕ್ತಪಡಿಸಿದರು.ಪಟ್ಟಣದ ಉತ್ತನೂರು ರಾಜಮ್ಮ ವೇದಿಕೆಯಲ್ಲಿ ಗುರುವಾರ ತಾಲ್ಲೂಕು ಮಟ್ಟದ 2ನೇ ಕನ್ನಡ ಸಾಹಿತ್ಯ ಸಮ್ಮೆ ೀಳನದ ಪ್ರಯುಕ್ತ ನಡೆದ ಸ್ಥಳೀಯ ಸಮಸ್ಯೆಗಳು ಮತ್ತು ಮಾರ್ಗೋಪಾಯಗಳು ಕುರಿತ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,  ಇಂಗ್ಲಿಷ್ ಶಾಲೆಗೆ ದೊಡ್ಡದೊಡ್ಡ ಕಟ್ಟಡಗಳಿವೆ. ಆದರೆ ಸೃಜನಾತ್ಮಕವಾಗಿ ಮಕ್ಕಳು ಭೌತಿಕ ಬೆಳವಣಿಗೆಗೆ ಬೇಕಾದ ಜೀವನೋತ್ಸಹವನ್ನು ತುಂಬುವ ಶಿಕ್ಷಣವಿಲ್ಲ ಎಂದರು.ಕನ್ನಡ ಶಾಲೆಗಳಿಗೆ ಎಲ್ಲ ಮೂಲಸೌಕರ್ಯಗಳನ್ನು ನೀಡುವುದು ಮಹತ್ವದ ವಿಷಯ. ಅದಕ್ಕೆ ಸ್ಥಳೀಯರಿಂದ ಸರ್ಕಾರದ ಮೇಲೆ ಹೆಚ್ಚಿನ ಒತ್ತಡ ಅಗತ್ಯ. ಶಿಕ್ಷಣವು ವರ್ತಮಾನದ ಬದುಕಿನ ಮಹತ್ವವನ್ನು ಕಳೆದುಕೊಳ್ಳುತ್ತಿದೆ ಎಂದರು. ಮಕ್ಕಳನ್ನು ಇಂಗ್ಲಿಷ್ ಶಿಕ್ಷಣದೊಂದಿಗೆ ಕಂಪ್ಯೂಟರ್ ವ್ಯಾಮೋಹಿಗಳನ್ನಾಗಿಸಿ ಸಹಜವಾಗಿ ಬದುಕುವ ಅವಕಾಶವನ್ನು ಕಿತ್ತುಕೊಳ್ಳಲಾಗಿದೆ ಎಂದರು.ಹೋರಾಟ ಅಗತ್ಯ: ಮರಳು ಗಣಿಗಾರಿಕೆ ಇಂದು ಸಾಮಾಜಿಕ ಅನಿಷ್ಟಗಳಲ್ಲಿ ಒಂದಾಗಿದೆ ಎಂದರು.

ಜಲಕ್ಷಾಮ ಕುರಿತು ಮಾತನಾಡಿದ ತ್ಯಾಗರಾಜ್, ಜಲಕ್ಷಾಮಕ್ಕೆ ಮನುಷ್ಯನ ಅತಿಯಾದ ಆಸೆ ಕಾರಣ. ಐವತ್ತು ವರ್ಷಗಳ ಹಿಂದೆ ಕೇವಲ ಮೂರು ಅಡಿ ಆಳದಲ್ಲಿ ಸಮೃದ್ಧವಾಗಿ ನೀರು ಸಿಗುತ್ತಿತ್ತು. ಇಂದು ಸಾವಿರಾರು ಅಡಿ ಕೊರೆದೂ ನೀರು ದಕ್ಕುತ್ತಿಲ್ಲ ಎಂದು ವಿಷಾದಿಸಿದರು.ಕನ್ನಡ ಶಾಲೆಗಳ ಸ್ಥಿತಿಗತಿಗಳ ಕುರಿತು ಕೆ.ಪ್ರಕಾಶ್ ಮಾತನಾಡಿದರು. ಸಮ್ಮೇಳನಾಧ್ಯಕ್ಷ ಎಚ್.ಎ.ಪುರುಷೋತ್ತಮರಾವ್, ನಂಗಲಿ ನಾಗರಾಜ್. ಪದ್ಮನಾಭರಾವ್, ಇ.ಶ್ರೀನಿವಾಸಗೌಡ ಉಪಸ್ಥಿತರಿದ್ದರು.ಕವಿಗೋಷ್ಠಿ: ನಂತರ ಲೇಖಕ ತಮ್ಮೋಜಿರಾವ್ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಯು.ವಿ.ನಾರಾಯಣಾಚಾರ್. ಮಂಜುಕನ್ನಿಕಾ, ಕವಿತಾ, ಕೆ.ನಾಗರಾಜ್ , ಬಲ್ಲ ಸೋಮಶೇಖರ್, ಎನ್,ಆನಂದಪ್ಪ, ಎನ್.ಸಿ. ರಾಜೇಶ್ವರಿ. ನಾ.ವೆಂಕಟರಮಣ, ರಾಧಿಕಾ, ಸುಬ್ರಮಣಿ ಅಸಲಿ ಅತ್ತಿಕುಂಟೆ, ನಲ್ಲೂರು ಚಲಪತಿ. ಕೊತ್ತಂಡ್ಲಹಳ್ಳಿ ನಾಗರಾಜ್, ಎಸ್.ಟಿ., ಬಾಳಸಂದ್ರ, ವೆಂಕಟರಮಣ, ಶ್ರೀನಿವಾಸ್, ಎ.ಅಪ್ಪಾಜಿಗೌಡ, ಎನ್.ಜಗದೀಶ್. ಡಾ.ರಮಾಕಾಂತ್ ಕವಿತೆ ಓದಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.