ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆ

7

ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆ

Published:
Updated:

ಚಿತ್ರದುರ್ಗ: ಜಿಲ್ಲೆಯ ಮೂರು ಸ್ಥಳೀಯ ಸಂಸ್ಥೆಗಳ ಮೂವರು ಸದಸ್ಯರ ಸ್ಥಾನಗಳಿಗೆ ಉಪ ಚುನಾವಣೆ ನಡೆಯುತ್ತಿದ್ದು, ಹೊಳಲ್ಕೆರೆ ಪಟ್ಟಣ ಪಂಚಾಯಿತಿ 15 ನೇ ವಾರ್ಡ್‌ನಿಂದ ಬಿಜೆಪಿ ಡಿ.ಆರ್. ಮಹಾಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾದ ಶನಿವಾರದಂದು ಕಣದಲ್ಲಿ ಅಂತಿಮವಾಗಿ ಡಿ.ಆರ್. ಮಹಾಸ್ವಾಮಿ ಉಳಿದಿದ್ದರಿಂದ ಹೊಳಲ್ಕೆರೆ ಪ.ಪಂ.ಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಚಿತ್ರದುರ್ಗ ನಗರಸಭೆಯ 8ನೇ ವಾರ್ಡ್ ಹಾಗೂ ಹೊಸದುರ್ಗ ಪುರಸಭೆಯ 23ನೇ ವಾರ್ಡ್‌ಗೆ ಒಟ್ಟು 8 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ನಗರಸಭೆಯ 8ನೇ ವಾರ್ಡ್‌ಗೆ ಬಿಜೆಪಿಯ ಜಿ.ಎಂ. ಪ್ರಕಾಶ್, ಕಾಂಗ್ರೆಸ್‌ನ ಎಂ. ನಳಿನಾ ಮರುಳಾರಾಧ್ಯ, ಜೆಡಿಎಸ್‌ನ ಬಿ. ರೂಪಾ ಸ್ಪರ್ಧೆಯಲ್ಲಿದ್ದಾರೆ. ಹೊಸದುರ್ಗ ಪುರಸಭೆಯ 23ನೇ ವಾರ್ಡ್‌ಗೆ ಬಿಜೆಪಿಯ ಎಚ್.ಎ. ಸುಮಾ, ಕಾಂಗ್ರೆಸ್‌ನ ಜಿ.ಎಸ್. ಸುಲೋಚನಮ್ಮ, ಜೆಡಿಎಸ್‌ನ ಆರ್.  ಅನುರಾಧಾ, ಪಕ್ಷೇತರರಾಗಿ ಎಚ್.ಟಿ. ಪ್ರತಿಭಾ, ಎಚ್.ಎಂ. ಮಂಜುಳಾ ಅಂತಿಮ ಕಣದಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry