ಸ್ಥಳ ಬದಲಾವಣೆಗೆ ಜಯಾ ಕೋರಿಕೆ

7

ಸ್ಥಳ ಬದಲಾವಣೆಗೆ ಜಯಾ ಕೋರಿಕೆ

Published:
Updated:

ನವದೆಹಲಿ (ಐಎಎನ್‌ಎಸ್):  ಜಯಾ ಬಚ್ಚನ್ ಅವರು ರಾಜ್ಯಸಭೆಯಲ್ಲಿ ತಮಗೆ ಮೀಸಲಾದ ಸ್ಥಳ ಬದಲಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ.ರಾಜ್ಯಸಭೆಗೆ ನಾಮಕರಣಗೊಂಡಿರುವ ನಟಿ ರೇಖಾ ಅವರಿಗೆ ಜಯಾ ಬಚ್ಚನ್ ಅವರ ಹಿಂಬದಿಯಲ್ಲೇ ಆಸನ ಕಲ್ಪಿಸಿರುವುದೇ ಇದಕ್ಕೆ ಕಾರಣ. ಸಮಾಜವಾದಿ ಪಕ್ಷದ ಸದಸ್ಯೆ ಜಯಾ ಬಚ್ಚನ್ ಅವರಿಗೆ 91ನೇ ಸಂಖ್ಯೆಯ ಆಸನ ನೀಡಲಾಗಿದ್ದು, ರೇಖಾ ಅವರಿಗೆ ಈ ಆಸನದ ಹಿಂಬದಿಗೇ ಬರುವ 99ನೇ ಸಂಖ್ಯೆಯ ಸ್ಥಳವನ್ನು ನಿಗದಿ ಮಾಡಲಾಗಿದೆ.

 

ಆದ್ದರಿಂದ ಜಯಾ ಬಚ್ಚನ್ ಅವರು ತಮ್ಮ ಆಸನ ಬದಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್ ಅವರಿಗೆ 103ನೇ ಸಂಖ್ಯೆ ಆಸನ  ನೀಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry