ಮಂಗಳವಾರ, ಏಪ್ರಿಲ್ 20, 2021
32 °C

ಸ್ಥಾನ(ಮಾನ)ಗಳು ಬದಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಖ್ಯಮಂತ್ರಿ ಬದಲಾದ ಕಾರಣ ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಸಾಲಿನ ಆಸನಗಳ ಹಂಚಿಕೆಯ್ಲ್ಲಲಿ ಸಣ್ಣಪುಟ್ಟ ಬದಲಾವಣೆಗಳು ಆಗಿವೆ. ಕಳೆದ ಅಧಿವೇಶನದಲ್ಲಿ ಪ್ರಥಮ ಸಾಲಿನ 3ನೇ ಸ್ಥಾನದಲ್ಲಿದ್ದ ಜಗದೀಶ ಶೆಟ್ಟರ್ ಈಗ ಮುಖ್ಯಮಂತ್ರಿ. ಹೀಗಾಗಿ ಮೊದಲ ಆಸನ ಅಲಂಕರಿಸಿದ್ದಾರೆ. ಉಪ ಮುಖ್ಯಮಂತ್ರಿಗಳಾದ ಕೆ.ಎಸ್.ಈಶ್ವರಪ್ಪ, ಆರ್. ಅಶೋಕ ಅವರಿಗೆ ಕ್ರಮವಾಗಿ 2, 3ನೇ ಆಸನ ನೀಡಲಾಗಿದೆ. 2ನೇ ಆಸನದಲ್ಲಿದ್ದ  ಸಚಿವ ಎಸ್.ಸುರೇಶ್‌ಕುಮಾರ್ ಈಗ 4ನೇ  ಆಸನಕ್ಕೆ ಸ್ಥಳಾಂತರಗೊಂಡಿದ್ದಾರೆ.2 ನೇ ಆಸನದಲ್ಲಿದ್ದ ಸಚಿವ ಬಸವರಾಜ ಬೊಮ್ಮಾಯಿ ಈಗ ಮೊದಲ ಸಾಲಿಗೆ ಬಂದಿದ್ದಾರೆ. ಸಚಿವರಾದ ಗೋವಿಂದ ಕಾರಜೋಳ, ಸಿ.ಎಂ.ಉದಾಸಿ, ಉಮೇಶ್ ಕತ್ತಿ ಮೊದಲಾದ ಹಿರಿಯ ಸಚಿವರು ಮೊದಲಿನಂತೆ 1ನೇ ಸಾಲಿನಲ್ಲೇ ಇದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.