ಸ್ಥಾನ ಕಳೆದುಕೊಂಡ ಪಾಂಟಿಂಗ್

7

ಸ್ಥಾನ ಕಳೆದುಕೊಂಡ ಪಾಂಟಿಂಗ್

Published:
Updated:

ಬ್ರಿಸ್ಬೇನ್ (ಪಿಟಿಐ): ಆಸ್ಟ್ರೇಲಿಯಾಕ್ಕೆ ಎರಡು ಬಾರಿ ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ಚಾಂಪಿಯನ್ ಪಟ್ಟ ದೊರಕಿಸಿಕೊಟ್ಟ ಮಾಜಿ ನಾಯಕ ರಿಕಿ ಪಾಂಟಿಂಗ್‌ಗೆ ಈಗ ತಂಡದಲ್ಲಿ ಸ್ಥಾನವಿಲ್ಲ. ಅವರನ್ನು ತ್ರಿಕೋನ ಸರಣಿಯ ಮುಂದಿನ ಎರಡು ಪಂದ್ಯಗಳಿಗಾಗಿ ಪ್ರಕಟಿಸಿದ ತಂಡದಿಂದ ಕೈಬಿಡಲಾಗಿದೆ.

37 ವರ್ಷ ವಯಸ್ಸಿನ ಪಾಂಟಿಂಗ್ ಅವರು ಈ ಸರಣಿಯಲ್ಲಿ ಆಡಿದ ಐದು ಇನಿಂಗ್ಸ್‌ಗಳಲ್ಲಿ 3.6ರ ಸರಾಸರಿಯಲ್ಲಿ ಗಳಿಸಿದ್ದು ಒಟ್ಟು 18 ರನ್ ಮಾತ್ರ. ಆದ್ದರಿಂದ ಆಸ್ಟ್ರೇಲಿಯಾ ಕ್ರಿಕೆಟ್(ಸಿಎ)ನ ರಾಷ್ಟ್ರೀಯ ಆಯ್ಕೆಗಾರರು ಸಹನೆ ಕಳೆದುಕೊಂಡಿದ್ದಾರೆ. ಪರಿಣಾಮವಾಗಿ ಅನುಭವಿ ಬ್ಯಾಟ್ಸ್‌ಮನ್ ತಂಡದಿಂದ ಹೊರಗೆ ಉಳಿಯಬೇಕಾದ ದುರಂತ.

ಆಯ್ಕೆ ಸಮಿತಿಯಿಂದ ಮಾಹಿತಿ ಬಂದ ತಕ್ಷಣ ಮುಂದೇನಾಗುವುದು ಎನ್ನುವುದನ್ನು `ಪಂಟರ್~ ನಿರ್ಧರಿಸಿಬಿಟ್ಟಿದ್ದರು. ತಂಡದಲ್ಲಿನ ಸ್ಥಾನ ಕಳೆದು ಹೋಯಿತು. ಈಗ ಅವರು ತಮ್ಮ ಮುಂದಿನ ಹೆಜ್ಜೆಯ ಕುರಿತು ಚಿಂತನೆ ನಡೆಸಿದ್ದಾರೆ. ಕೆಲ ದಿನಗಳಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮುಂದುವರಿಯುವ ಕುರಿತು ಅಂತಿಮ ನಿರ್ಣಯ ಕೈಗೊಳ್ಳುವ ಸಾಧ್ಯತೆಯಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry