ಸ್ಥಾಯಿ ಸಮಿತಿ: ಸದಸ್ಯರ ನಡುವೆ ಮಾತಿನ ಚಕಮಕಿ

7

ಸ್ಥಾಯಿ ಸಮಿತಿ: ಸದಸ್ಯರ ನಡುವೆ ಮಾತಿನ ಚಕಮಕಿ

Published:
Updated:

 ಬಾಗೇಪಲ್ಲಿ: ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಶನಿವಾರ ಪುರಸಭಾ ಅಧ್ಯಕ್ಷರಾದ ಸುಜಾತಮ್ಮ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.ಪಟ್ಟಣದ 23 ವಾರ್ಡ್‌ಗಳ ಪೈಕಿ ಕೇವಲ 4 ವಾರ್ಡ್‌ಗಳಿಗೆ ಈ ಬಾರಿ ಹಣಕಾಸಿನ ನೆರವು ನೀಡಲಾಗಿದೆ ಎಂದು ಸದಸ್ಯ ಎ.ನರಸಿಂಹಮೂರ್ತಿ ಆರೋಪಿಸಿದರು. ಪುರಸಭಾ ಮುಖ್ಯಾಧಿಕಾರಿ ಪ್ರತಿಕ್ರಿಯಿಸಿ ಪಟ್ಟಣದ 23 ವಾರ್ಡ್‌ಗಳ ಅಭಿವೃ ದ್ಧಿಗೆ 13ನೇ ಹಣಕಾಸು ಯೋಜನೆಯಲ್ಲಿ ನೆರವು ನೀಡಲಾಗುವುದು ಎಂದು ಸಭೆಗೆ ತಿಳಿಸಿದರು. 13ನೇ ಹಣಕಾಸಿನ ನೆರವಿನ ಬಗ್ಗೆ ಮುಂದಿನ ಸಭೆಯಲ್ಲಿ ತೀರ್ಮಾನಿಸಲು ನಿರ್ಧಾರ ಕೈಗೊಳ್ಳಲಾಯಿತು.ಪಟ್ಟಣದಲ್ಲಿರುವ ಕುಡಿಯುವ ನೀರು ಸರಬ  ರಾಜು ಕೇಂದ್ರಗಳಲ್ಲಿ ಪಂಪ್, ಮೋಟಾರ್‌ಗಳು ಕೆಟ್ಟಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ತಲೆ ದೋರಿದೆ. ಈ ಬಗ್ಗೆ ಇರುವ ತೊಡಕುಗಳನ್ನು ಸಭೆಗೆ ವಿವರಿಸಬೇಕು ಎಂದು ಸದಸ್ಯ ಮಹಮದ್ ಎಸ್.ನೂರುಲ್ಲಾ ತಿಳಿಸಿದರು. ವಾರ್ಡ್‌ಗಳಲ್ಲಿ ಪೈಪ್‌ಲೈನ್ ಅಳವಡಿಸುವ ಕುರಿತು ಸದಸ್ಯರಿಗೆ ಯಾವುದೇ ಮಾಹಿತಿ ನೀಡದೆ ಕ್ರಿಯಾಯೋಜನೆ ಸಿದ್ದಪಡಿಸಿರುವ ಕುರಿತು ಸದಸ್ಯ ನರಸಿಂಹಪ್ಪ ಅವರು ಮುಖ್ಯಾಧಿ ಕಾರಿಗೆ ತರಾಟೆ ತೆಗೆದಕೊಂಡರು.ಪಟ್ಟಣದ 1ನೇ ವಾರ್ಡ್ ವ್ಯಾಪ್ತಿಯ ಮಿನಿ ಕ್ರೀಡಾಂಗಣದಲ್ಲಿ ಮಳೆ ನೀರು ಸರಾಗವಾಗಿ ಹರಿಯದೇ ಸಮೀಪದ ಮನೆಗಳಿಗೆ ನುಗ್ಗುತ್ತಿದೆ. ಈ ಸಂಬಂಧ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜವಿಲ್ಲ ಎಂದು ಸದಸ್ಯ ಕರವೇ ಚಂದ್ರಶೇಖರ್ ಆರೋಪಿಸಿದರು.ಪಟ್ಟಣದ ನೇತಾಜಿ ವೃತ್ತದ ಪುರಸಭಾ ನಿವೇಶನ ದಲ್ಲಿ ಬಿಜೆಪಿ ಕಾರ್ಯಾಲಯ ನಿರ್ಮಿಸಬಹುದಾಗಿದೆ ಎಂದು ಹಿರಿಯ ಸದಸ್ಯ ಬಿ.ಆರ್.ನರಸಿಂಹನಾಯ್ಡು ಅಭಿಪ್ರಾಯ ವ್ಯಕ್ತಪಡಿಸಿದಾಗ ಇತರೆ ಸದಸ್ಯರು ಸಹಮತ ವ್ಯಕ್ತಪಡಿಸಿದರು. ತಾಲ್ಲೂಕು ರೈತ ಸಂಘವು ಪಟ್ಟಣದಲ್ಲಿ ರೈತ ಭವನ ನಿರ್ಮಿಸಲು ನಿವೇಶನಕ್ಕಾಗಿ ಮನವಿ ಮಾಡಲಾಗಿದೆ. ವಿಷಯಕ್ಕೆ ಬಗ್ಗೆ ಪ್ರತಿಕ್ರಿಯಿಸಿದ ಸದಸ್ಯ ಕೃಷಿ ಮಾರುಕಟ್ಟೆ ಸಮಿತಿಯಲ್ಲಿ ರೈತ ಭವನ ನಿರ್ಮಿಸಬಹುದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಎಸ್‌ಬಿಎಂ ರಸ್ತೆಯನ್ನು ರಾಜ್‌ಕುಮಾರ್ ರಸ್ತೆಯ ನ್ನಾಗಿ ಪರಿವರ್ತಿಸಲು ಸರ್ವಸದಸ್ಯರು ಸಭೆಯಲ್ಲಿ ತೀರ್ಮಾನಿಸಲಾಯಿತು.ಸದಸ್ಯರಲ್ಲೇ ಗೊಂದಲ: 23 ಮಂದಿ ಪುರಸಭಾ ಸದಸ್ಯರ ಪೈಕಿ 13 ಮಂದಿ ಕಳೆದ ದಿನಗಳಲ್ಲಿ ಅಧ್ಯಕ್ಷೆ ಸುಜಾತಮ್ಮ ಅವರ ಅವಿಶ್ವಾಸ ನಿರ್ಣಯ ಮಂಡನೆಗೆ ಒತ್ತಾಯಿಸಿ ಸಭೆ ಕರೆದಿದ್ದರು. ಸಭೆಯಲ್ಲಿ ಕೆಲ ಸದಸ್ಯರಿಗೆ ಭಾರಿ ಮುಖಭಂಗ ಕಾಣಿಸಿತ್ತು. ಅದೇ ರೀತಿಯಲ್ಲಿ ಶನಿವಾರ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ 13 ಮಂದಿ ಸದಸ್ಯರ ತಂಡದಲ್ಲಿ ಮಹಮದ್ ಎಸ್.ನೂರುಲ್ಲಾ, ಆನಂದ್ ಸ್ಥಾಯಿ ಸಮಿತಿ ಅಧ್ಯಕ್ಷರ ಆಕಾಂಕ್ಷಿಗಳಾಗಿದ್ದರು. ಆದರೆ ಸದಸ್ಯರಲ್ಲಿ ಅಭ್ಯರ್ಥಿಯ ಆಯ್ಕೆಯ ವಿಚಾರದಲ್ಲಿ ಭಾರೀ ಗೊಂದಲ ಕಾಣಿಸಿತು.ಸದಸ್ಯರ ನಡುವೆ ಮಾತಿನ ಚಕಮಕಿ: ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಶನಿವಾರ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಸದಸ್ಯರ ಅಭಿಪ್ರಾಯ ಕೇಳಲಾಗಿತ್ತು. 13 ಮಂದಿ ಪುರಸಭಾ ಸದಸ್ಯರ ತಂಡದ ಪ್ರಮುಖರಾಗಿರುವ ಸದಸ್ಯ ಮಹಮದ್ ಎಸ್.ನೂರುಲ್ಲಾ ಹಾಗೂ ಸದಸ್ಯ ಕಲೀಮುಲ್ಲಾ ನಡುವೆ ಮಾತಿನ ಚಕಮಕಿ ನಡೆಯಿತು.

11 ಮಂದಿ ಸದಸ್ಯರ ಬಹುಮತದಂತೆ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆಪ್ರಕ್ರಿಯೆ ನಡೆಸಬೇಕಾಗಿದೆ ಎಂದು ಸ್ಥಾನದ ಆಕಾಂಕ್ಷಿ ನೂರುಲ್ಲಾ ಮಖ್ಯಾಧಿಕಾರಿಯನ್ನು ಒತ್ತಾಯಿಸಿರು. ಅದಕ್ಕೆ ಸದಸ್ಯ ಕಲೀಮುಲ್ಲಾ ಆಕ್ಷೇಪಿಸಿದರು. ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಾಗ ಕೋಲಾಹಲ ಉಂಟಾಯಿತು. ಪುರಸಭಾ ಮುಖ್ಯಾಧಿಕಾರಿ ಸುಧಾಕರ್‌ಭಟ್ ಮಧ್ಯಪ್ರವೇಶಿಸಿ ಸದಸ್ಯರನ್ನು ಸಮಾಧಾನ ಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry