ಗುರುವಾರ , ಮೇ 19, 2022
21 °C

ಸ್ಥಿರ ದೂರವಾಣಿ ವಾಣಿಜ್ಯ ಕರೆ ನಿಷೇಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಸ್ಥಿರ ದೂರವಾಣಿಗೆ ಪ್ರತ್ಯೇಕ ಟೆಲಿಮಾರುಕಟ್ಟೆ ಕರೆ ಸಂಖ್ಯೆ  ನಿಗದಿಪಡಿಸಬೇಕು ಎನ್ನುವ ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ಪ್ರಸ್ತಾಪಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ.‘ದೂರವಾಣಿ ಕರೆ ವಿನಿಮಯ ಕೇಂದ್ರದಲ್ಲಿ  ಟೆಲಿಮಾರುಕಟ್ಟೆ ಸಂಖ್ಯೆಯ ಮೇಲೆ ನಿಗಾ ವಹಿಸಲು ಸಾಧ್ಯವಿಲ್ಲ. ಇದು ಭದ್ರತೆಗೆ ತೀವ್ರ ಅಡ್ಡಿಯನ್ನುಂಟು ಮಾಡುತ್ತವೆ’ ಎಂದು ದೂರಸಂಪರ್ಕ ಇಲಾಖೆ (ಡಾಟ್) ಹೇಳಿದೆ.‘ಸ್ಥಿರ ದೂರವಾಣಿ ಕೇಂದ್ರದಲ್ಲಿ  ಹೆಚ್ಚಿನ ಕೆಲಸಗಳು ಯಾಂತ್ರಿಕೃತವಾಗಿಲ್ಲ, ಸಿಬ್ಬಂದಿಯೇ ನಿರ್ವಹಿಸುತ್ತಾರೆ.    ಮೊಬೈಲ್ ದೂರವಾಣಿ ಸಂಪರ್ಕಜಾಲದಲ್ಲಿರುವಂತೆ  ಇಲ್ಲಿ ಕರೆ ವಿನಿಮಯವನ್ನು ಯಾಂತ್ರಿಕವಾಗಿ ಮಾಡಲು ಸಾಧ್ಯವಿಲ್ಲ. ಆದ್ದರಿಂದ ವಾಣಿಜ್ಯ ಸಂಖ್ಯೆಯನ್ನು ಪ್ರತ್ಯೇಕವಾಗಿ ಪರಿಶೀಲಿಸುವ, ನಿಗಾ ವಹಿಸುವ ಕಾರ್ಯ  ಕಷ್ಟ ಎಂದು ‘ಡಾಟ್’ ಪ್ರಕಟಣೆ ತಿಳಿಸಿದೆ.ಸದ್ಯ ಸ್ಥಿರದೂರವಾಣಿ ಕರೆಗಳನ್ನು ‘ಎಸ್‌ಟಿಡಿ’ ಕೋಡ್ ಸಂಖ್ಯೆಯ ಆಧಾರದ ಮೇಲೆ ಕಂಡುಹಿಡಿಯಲಾಗುತ್ತದೆ.  ‘ಎಸ್‌ಟಿಡಿ’ ಜತೆಯಲ್ಲಿರುವ ಆರಂಭಿಕ ದೂರವಾಣಿ ಸಂಖ್ಯೆಗಳನ್ನು ಪರಿಶೀಲಿಸಿ ದೂರವಾಣಿ ಕರೆ ಎಲ್ಲಿಂದ ಬಂದಿದೆ ಎನ್ನುವುದನ್ನು ಪತ್ತೆ ಹಚ್ಚಬಹುದು. ಆದರೆ,  ಇದು ವಿನಿಮಯ ಕೇಂದ್ರದಿಂದ ವಿನಿಮಯ ಕೇಂದ್ರಕ್ಕೆ ಇದು ವ್ಯತ್ಯಾಸವಾಗುತ್ತದೆ. ವಾಣಿಜ್ಯ ಕರೆಗಳಿಗೆ ‘140’ ಸಂಖ್ಯೆ ನಿಗದಿಪಡಿಸಿದರೆ ಇದು  ಹೊಸದಾಗಿ ನೀಡುತ್ತಿರುವ ‘ಎಸ್‌ಟಿಡಿ’ ಸಂಪರ್ಕ ವ್ಯವಸ್ಥೆಯ  ಇಡೀ ಸಂಖ್ಯಾ ಸರಣಿಯ ಮೇಲೆ ಪರಿಣಾಮ ಬೀರಲಿದ್ದು, ಇದನ್ನೂ ಬದಲಿಸಬೇಕಾಗುತ್ತದೆ. ಇದು ಜಾರಿಗೊಂಡರೂ, ಭದ್ರತಾ ಸಂಸ್ಥೆಗಳಿಗೆ ದೇಶದಾದ್ಯಂತ ವಾಣಿಜ್ಯ ಕರೆಗಳ ಮೇಲೆ ನಿಗಾ ವಹಿಸುವುದು ಕಷ್ಟವಾಗುತ್ತದೆ ಎಂದಿದೆ.  ಹೊಸ ಸಂಖ್ಯಾ ಶ್ರೇಣಿ  ಸೇರ್ಪಡೆಗೊಳಿಸಿಕೊಳ್ಳಲು ಸ್ಥಿರ ದೂರವಾಣಿ ಕಂಪೆನಿಗಳು ಪ್ರತ್ಯೇಕ ‘ಗ್ರಾಮೀಣ ಸ್ವಯಂಚಾಲಿತ ವಿನಿಯಮ (ಆರ್‌ಎಕ್ಸ್) ಕೇಂದ್ರ ಸ್ಥಾಪಿಸಬೇಕು. ಇದು ಜಾರಿಗೊಂಡರೂ ಪ್ರಾಥಮಿಕ ಹಂತದಲ್ಲಿ ದುರ್ಬಳಕೆಯಾಗುವ  ಸಾಧ್ಯತೆ ಇದೆ. ಹೀಗಾಗಿ ‘ನಾವು ಹೆಚ್ಚಿನ ಜವಾಬ್ದಾರಿಯನ್ನು ಹೊರಲು ಸಿದ್ಧವಿಲ್ಲ’ ಎಂದು ದೂರವಾಣಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.