ಸ್ನಾನಕ್ಕೆ ಹೋದ ವಿದ್ಯಾರ್ಥಿನಿಯರು ನೀರುಪಾಲು

ಮಂಗಳವಾರ, ಜೂಲೈ 23, 2019
27 °C

ಸ್ನಾನಕ್ಕೆ ಹೋದ ವಿದ್ಯಾರ್ಥಿನಿಯರು ನೀರುಪಾಲು

Published:
Updated:

ಕೋಟ(ಬ್ರಹ್ಮಾವರ): ಕೋಟ ಸಮೀಪದ ಬೇಳೂರು ಮೊಗೆಬೆಟ್ಟು ಕಲ್ಲುಕೊರೆಯಲ್ಲಿ ಶನಿವಾರ ಮಧ್ಯಾಹ್ನ ಸ್ನಾನಕ್ಕೆ ಹೋದ ಇಬ್ಬರು ವಿದ್ಯಾರ್ಥಿನಿ ಯರು ನೀರುಪಾಲಾದ ಘಟನೆ ನಡೆದಿದೆ.ಧನಲಕ್ಷ್ಮಿ (12) ಮತ್ತು ಸಂಧ್ಯಾ(9) ಮೃತಪಟ್ಟವರು. ಧನಲಕ್ಷ್ಮೀ ನೂಜಿ ಸರ್ಕಾರಿ ಶಾಲೆಯಲ್ಲಿ 6ನೇ ತರಗತಿಯಲ್ಲಿ ಮತ್ತು ಸಂಧ್ಯಾ 3ನೇ ತರಗತಿಯಲ್ಲಿ ವ್ಯಾಸಂಗ ಮಾಡು ತ್ತಿದ್ದರು. ಶನಿವಾರ ಮಧ್ಯಾಹ್ನ ಮಿತ್ರರಾದ ಶ್ರೀಕಾಂತ್, ಜಯಶ್ರೀ, ಸಂಗರಾಜು ಅವರೊಂದಿಗೆ ಸ್ನಾನಕ್ಕೆ ತೆರಳಿದ್ದ ಇವರು ಮುಳುಗಿ ಮೃತಪಟ್ಟಿದ್ದಾರೆ. ಉಳಿದ ಮಕ್ಕಳು ಮುಳುಗುತ್ತಿದ್ದ ಈ ಇಬ್ಬರು ಮಕ್ಕಳನ್ನು ನೋಡಿ ಕೂಗಿದಾಗ ಅಕ್ಕಪಕ್ಕದವರು ಬಂದು ನೋಡುವಷ್ಟರಲ್ಲಿ ಇಬ್ಬರೂ ಮೃತಪಟ್ಟಿದ್ದರು ಎನ್ನಲಾಗಿದೆ.ಧನಲಕ್ಷ್ಮಿ ಮೂಲತಃ ತಮಿಳುನಾಡಿನ ತವಸ್ವಿ, ಕಾಮಾಕ್ಷಿ ದಂಪತಿಯ ಮಗಳಾ ಗಿದ್ದು, ಮೊಗೆಬೆಟ್ಟಿನಲ್ಲಿ  ಕಲ್ಲು ಕೋರೆಯಲ್ಲಿ ಕಳೆದ 10ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಸಂಧ್ಯಾ ಮೈಸೂರಿನ ಮಾದೇಶ ಮತ್ತು ಲಕ್ಷ್ಮಿಯ ಪುತ್ರಿ. ಘಟನೆಯ ಸುದ್ಧಿ ತಿಳಿಯುತ್ತಲೇ ನೂರಾರು ಜನರು ಸ್ಥಳಕ್ಕಾಗಮಿಸಿದ್ದರು. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಚಿನ್ನ ತೊಳೆಯುವ ನೆಪದಲ್ಲಿ ವಂಚನೆ: ಇಬ್ಬರ ಬಂಧನ

ಬೆಳ್ತಂಗಡಿ:
ತಾಲ್ಲೂಕಿನ ನಾವೂರು ಗ್ರಾಮದ ಮುರ- ಕೈಕಂಬ ಎಂಬಲ್ಲಿ ಶನಿವಾರ ಚಿನ್ನದ ಆಭರಣ ತೊಳೆಯುವ ನೆದಲ್ಲಿ ವಂಚಿಸಿದ ಆಪರಿಚಿತರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.  

ಬಿಹಾರ ನಿವಾಸಿಗಳಾದ ಜಯವಲ್ಲಭ ಕುಮಾರ್ ಮತ್ತು ಮನೋಜ್ ಬಂಧಿತ ಆರೋಪಿಗಳು. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry