ಸ್ನೂಕರ್‌: ಅಂತಿಮ ಹಂತಕ್ಕೆ ವರುಣ್‌

7

ಸ್ನೂಕರ್‌: ಅಂತಿಮ ಹಂತಕ್ಕೆ ವರುಣ್‌

Published:
Updated:

ಬೆಂಗಳೂರು: ಉತ್ತಮ ಪ್ರದರ್ಶನ ನೀಡಿದ ಜೆ. ವರುಣ್‌ ಕುಮಾರ್‌ ಇಲ್ಲಿ ನಡೆಯುತ್ತಿರುವ ಇಂಡಿಯನ್‌ ಓಪನ್‌ ಸ್ನೂಕರ್‌ ಟೂರ್ನಿಯ ಅರ್ಹತಾ ಹಂತದ ಅಂತಿಮ ಸುತ್ತು ಪ್ರವೇಶಿಸಿದರು.ಕೆಎಸ್‌ಬಿಎ ಹಾಲ್‌ನಲ್ಲಿ ಮಂಗಳವಾರ ನಡೆದ ಐದನೇ ಸುತ್ತಿನ ಪಂದ್ಯದಲ್ಲಿ ವರುಣ್‌ 42–-72, 68–-33, 70-–22, 88-–79, 66–-51 ರಲ್ಲಿ ಐ.ಎಚ್‌. ಮನುದೇವ್‌ಗೆ ಆಘಾತ ನೀಡಿದರು.ವರುಣ್‌ ಅಲ್ಲದೆ ಪುಷ್ಪೇಂದರ್‌ ಸಿಂಗ್‌, ಕಮಲ್‌ ಚಾವ್ಲಾ, ಸೌರವ್‌ ಕೊಠಾರಿ ಮತ್ತು ಹಿಮಾನ್ಶು ಜೈನ್‌ ಅವರೂ ಬೆಂಗಳೂರು ವಲಯದ ಟೂರ್ನಿಯಿಂದ ಅಂತಿಮ ಹಂತಕ್ಕೆ ಅರ್ಹತೆ ಪಡೆದರು.ಕಮಲ್‌ ಚಾವ್ಲಾ 60-–29, 56–-23, 72-–15, 21–-58, 72-–30 ರಲ್ಲಿ ವರುಣ್‌ ಮದನ್‌ ಮೇಲೂ, ಸೌರವ್‌ 73–-21, 60-–34, 55-–34, 64-–46 ಫ್ರೇಮ್‌ಗಳಿಂದ ಹಿಮಾನ್ಶು ಎದುರೂ, ಪುಷ್ಪೇಂದರ್‌ 38–-62, 70–-9, 10–-69, 66–-52, 57-–15, 57-–49 ರಲ್ಲಿ ರಫತ್‌   ಹಬೀಬಿ ವಿರುದ್ಧವೂ ಜಯ ಸಾಧಿಸಿದರು.ಅರ್ಹತಾ ಹಂತದ ಅಂತಿಮ ಸುತ್ತು ನಾಕೌಟ್‌ ಮಾದರಿಯಲ್ಲಿ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry