ಸ್ನೂಕರ್ : ಆದಿತ್ಯಗೆ ಪ್ರಶಸ್ತಿ

7

ಸ್ನೂಕರ್ : ಆದಿತ್ಯಗೆ ಪ್ರಶಸ್ತಿ

Published:
Updated:
ಸ್ನೂಕರ್ : ಆದಿತ್ಯಗೆ ಪ್ರಶಸ್ತಿ

ಚೆನ್ನೈ (ಐಎಎನ್‌ಎಸ್): ಪಿಎಸ್‌ಪಿಬಿಯನ್ನು ಪ್ರತಿನಿಧಿಸುವ ಆದಿತ್ಯ ಮೆಹ್ತಾ ಅವರು ಇಲ್ಲಿ ನಡೆದ 78ನೇ ರಾಷ್ಟ್ರೀಯ ಸ್ನೂಕರ್ ಚಾಂಪಿಯನ್‌ಷಿಪ್‌ನ ಪ್ರಶಸ್ತಿಯನ್ನು ಗೆದ್ದರು.ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ ಆದಿತ್ಯ 66-6, 6-63, 72-65, 67-41, 67-10, 74-58, 43-52, 82-5ರಲ್ಲಿ ಆಲೋಕ್ ಕುಮಾರ್ ಅವರನ್ನು ಮಣಿಸಿ ಪ್ರಶಸ್ತಿಯನ್ನು ಗೆದ್ದುಕೊಂಡರು.ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ಅಲೋಕ್ ಕುಮಾರ್ ರೈಲ್ವೇಸ್‌ನ ನೀರಜ್ ಕುಮಾರ್ ಮೇಲೂ, ಆದಿತ್ಯ ಮೆಹ್ತಾ ಕರ್ನಾಟಕದ ಐ.ಎಚ್. ಮನುದೇವ್ ವಿರುದ್ಧವೂ ಗೆಲುವು ಪಡೆದು ಫೈನಲ್ ಪ್ರವೇಶಿಸಿದ್ದರು.ಅಲೋಕ್ ಕುಮಾರ್‌ಗೆ ಎರಡು ಹಾಗೂ ಏಳನೇ ಫ್ರೇಮ್‌ಗಳಲ್ಲಿ ಮಾತ್ರ ಗೆಲುವು ಪಡೆಯುಲು ಸಾಧ್ಯವಾಯಿತು.`ಈ ಮಧುರ ದಿನಕ್ಕಾಗಿ ಸಾಕಷ್ಟು ವರ್ಷಗಳಿಂದ ಕಾಯುತ್ತಿದ್ದೆ. ಈಗ ನನ್ನ ಅಮೂಲ್ಯ ಕನಸು ನನಸು ಮಾಡಿಕೊಂಡ ಸಂಭ್ರಮದಲ್ಲಿದ್ದೇನೆ~ ಎಂದು ಆದಿತ್ಯ ಪ್ರತಿಕ್ರಿಯಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry