ಸ್ನೂಕರ್: ಚಿಕ್ಕಬಸಪ್ಪ ಕ್ಲಬ್‌ಗೆ ಜಯ

7

ಸ್ನೂಕರ್: ಚಿಕ್ಕಬಸಪ್ಪ ಕ್ಲಬ್‌ಗೆ ಜಯ

Published:
Updated:

ವಿರಾಜಪೇಟೆ: ಜಿಲ್ಲಾ ಮಟ್ಟದ ಅಂತರ ಕ್ಲಬ್ ಸ್ನೂಕರ್ ಟೂರ್ನಿಯ ಅಂತಿಮ ಪಂದ್ಯದಲ್ಲಿ ಸೋಮವಾರಪೇಟೆಯ ಚಿಕ್ಕಬಸಪ್ಪ ಕ್ಲಬ್ ಜಯ ಸಾಧಿಸಿದೆ.ಗೋಣಿಕೊಪ್ಪ ಪ್ಲಾಂಟರ್ಸ್‌ ಕ್ಲಬ್ ಹಾಗೂ ಸೋಮವಾರಪೇಟೆಯ ಚಿಕ್ಕ ಬಸಪ್ಪ ಕ್ಲಬ್‌ಗಳ ನಡುವೆ ಸೋಮವಾರ ಅಂತಿಮ ಪಂದ್ಯ ನಡೆಯಿತು.ಇಲ್ಲಿಯ ವಿಕ್ಟೋರಿಯಾ ಕ್ಲಬ್‌ನ ಸಭಾಂಗಣದಲ್ಲಿ ಕ್ಲಬ್‌ನ ಅಧ್ಯಕ್ಷ ಡಾ.ಎಂ.ಸಿ.ಕಾರ್ಯಪ್ಪ ಅವರು ತಮ್ಮ ತಂದೆ ಡಾ.ಚಂಗಪ್ಪ ಆವರ ಸ್ಮರಣಾರ್ಥ ಅಂತರ ಕ್ಲಬ್ ಸ್ನೂಕರ್ ಟೂರ್ನಿಗೆ ನ.26ರಂದು ಚಾಲನೆ ನೀಡಿದ್ದರು. ಜಿಲ್ಲೆಯಿಂದ ಒಟ್ಟು 12 ತಂಡಗಳು ಭಾಗವಹಿಸಿದ್ದವು.ಡಾ.ಕಾರ್ಯಪ್ಪ ಟ್ರೋಫಿ ವಿತರಿಸಿದರು.  ಕ್ಲಬ್ ಉಪಾಧ್ಯಕ್ಷ ಕ್ಯಾಟಿ ಉತ್ತಪ್ಪ, ಕಾರ್ಯದರ್ಶಿ ಪೂವಯ್ಯ, ಎನ್.ಎಂ.ಕುಟ್ಟಪ್ಪ, ಅರ್ಜುನ್ ಕಾವೇರಪ್ಪ, ರಾಜೀವ್ ಕಾರ್ಯಪ್ಪ, ಎಂ.ಎ.ಪೊನ್ನಣ್ಣ ಎಂ.ಪಿ.ಅಪ್ಪಣ್ಣ, ಎಂ.ಬಿ.ಕಾವೇರಪ್ಪ ಹಾಗೂ ಕ್ಲಬ್‌ನ ಸದಸ್ಯರು  ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry