ಸ್ನೂಕರ್: ಪಂಕಜ್‌ಗೆ ಜಯ

7

ಸ್ನೂಕರ್: ಪಂಕಜ್‌ಗೆ ಜಯ

Published:
Updated:

ಪುಣೆ: ಪಂಕಜ್ ಅಡ್ವಾಣಿ ಇಲ್ಲಿ ನಡೆಯುತ್ತಿರುವ 78ನೇ ರಾಷ್ಟ್ರೀಯ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ಸತತ ಮೂರನೇ ಗೆಲುವು ಪಡೆದು ನಾಕೌಟ್ ಹಂತ ಪ್ರವೇಶಿಸುವುದನ್ನು ಖಚಿತಪಡಿಸಿಕೊಂಡಿದ್ದಾರೆ.ಪಿವೈಸಿ ಹಿಂದು ಜಿಮ್ಖಾನಾ ಹಾಲ್‌ನಲ್ಲಿ ಬುಧವಾರ ನಡೆದ `ಎಫ್~ ಗುಂಪಿನ ಪಂದ್ಯದಲ್ಲಿ ಬೆಂಗಳೂರಿನ ಪಂಕಜ್ 71-15, 61-71, 15-68, 61-34, 92-5 ರಲ್ಲಿ ಮಹಾರಾಷ್ಟ್ರದ ನಿಖಿಲ್ ವಿರುದ್ಧ ಗೆಲುವು ಪಡೆದರು.ಕರ್ನಾಟಕದ ಸಾಜನ್ ಬೋಪಣ್ಣ ದಿನದ ಮೊದಲ ಪಂದ್ಯದಲ್ಲಿ 2-3 ರಲ್ಲಿ ಅಮೀರ್ ಹುಸೇನ್ ಎದುರು ಸೋಲು ಅನುಭವಿಸಿದರೆ, ಆ ಬಳಿಕ 3-2 ರಲ್ಲಿ ಗುಜರಾತ್‌ನ ಭದ್ರೇಶ್ ಪಂಚಾಲ್ ಎದುರು ಗೆದ್ದರು. ಐ.ಎಚ್. ಮನುದೇವ್ ನಿರಾಸೆ ಅನುಭವಿಸಿದರು.ಕಳೆದ ಬಾರಿಯ `ರನ್ನರ್ ಅಪ್~ ಅಲೋಕ್ ಕುಮಾರ್ 2-3 ರಲ್ಲಿ ದೆಹಲಿಯ ಪುಲಕಿತ್ ತುಕರಾಲ್ ಎದುರು ಪರಾಭವಗೊಂಡರು. ಕಮಲ್ ಚಾವ್ಲಾ, ಸೌರವ್ ಕೊಠಾರಿ ಮತ್ತು ಬ್ರಿಜೇಶ್ ದಮನಿ ಗೆಲುವಿನ ಮೂಲಕ ನಾಕೌಟ್ ಹಂತದಲ್ಲಿ ಸ್ಥಾನ ಖಚಿತಪಡಿಸಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry