ಸ್ನೂಕರ್: ಪಂಕಜ್ ಶುಭಾರಂಭ

7

ಸ್ನೂಕರ್: ಪಂಕಜ್ ಶುಭಾರಂಭ

Published:
Updated:
ಸ್ನೂಕರ್: ಪಂಕಜ್ ಶುಭಾರಂಭ

ಚೆನ್ನೈ (ಪಿಟಿಐ): ಕಳೆದ ಬಾರಿಯ ಚಾಂಪಿಯನ್ ಪಂಕಜ್ ಅಡ್ವಾಣಿ ಅವರು ಇಲ್ಲಿ ನಡೆಯುತ್ತಿರುವ 78ನೇ ರಾಷ್ಟ್ರೀಯ ಸೀನಿಯರ್ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದರು.ಶುಕ್ರವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಪಂಕಜ್ 3-0 ರಲ್ಲಿ ರಾಜಸ್ತಾನದ ರಣವೀರ್ ಸಿಂಗ್ ಯಾದವ್ ವಿರುದ್ಧ ಜಯ ಪಡೆದರು. ಬೆಂಗಳೂರಿನ ಆಟಗಾರ ಗೆಲುವಿನ ಹಾದಿಯಲ್ಲಿ ಹೆಚ್ಚಿನ ಪರಿಶ್ರಮ ಪಡಲಿಲ್ಲ.ಸೌರವ್ ಕೊಠಾರಿ ಮತ್ತು ಪಂಜಾಬ್‌ನ ಅಲೋಕ್ ಕುಮಾರ್ ಕೂಡಾ ಮೊದಲ ಸುತ್ತಿನಲ್ಲಿ ಸುಲಭ ಗೆಲುವು ಪಡೆದರು. ಅಲೋಕ್ 3-0 ರಲ್ಲಿ ಗೋವಾದ ನೈಜೆಲ್ ಡಿಸೋಜಾ ವಿರುದ್ದ ಜಯ ಸಾಧಿಸಿದರು. ಕೊಠಾರಿ 3-0 ರಲ್ಲಿ ಉತ್ತರ ಪ್ರದೇಶದ ಮಲ್ಕೀತ್ ಸಂಗ್ ಅವರನ್ನು ಸೋಲಿಸಿದರು.ರೈಲ್ವೇಸ್‌ನ ಫೈಸಲ್ ಖಾನ್ 3-2 ರಲ್ಲಿ ಪಿಎಸ್‌ಪಿಬಿಯ ಆದಿಲ್ ಖಾನ್ ವಿರುದ್ಧ ಪ್ರಯಾಸದ ಗೆಲುವು ಪಡೆದರು. ಕೊನೆಯ ಫ್ರೇಮ್‌ನಲ್ಲಿ ಫೈಸಲ್ 45 ಮತ್ತು 44 ಬ್ರೇಕ್‌ಗಳನ್ನು ಪಡೆದು ಜಯ ಸಾಧಿಸಿದರು.ದಿನದ ಇತರ ಲೀಗ್ ಹಂತದ ಪಂದ್ಯಗಳಲ್ಲಿ ಪಿಎಸ್‌ಪಿಬಿಯ ಮನನ್ ಚಂದ್ರ 3-0 ರಲ್ಲಿ ಉತ್ತರ ಪ್ರದೇಶದ ವಿಕಾಸ್ ಶರ್ಮ ಮೇಲೂ, ಕರ್ನಾಟಕದ ಮನುದೇವ್ 3-0 ರಲ್ಲಿ ರಾಜಸ್ತಾನದ ಸಿಮ್ರಾನ್‌ಜೀತ್ ಸಿಂಗ್ ಎದುರೂ, ಪಶ್ಚಿಮ ಬಂಗಾಳದ ಮನೀಷ್ ಜೈನ್ 3-0 ರಲ್ಲಿ ಹರಿಯಾಣದ ವಿವೇಕ್ ಚೋಪ್ರಾ ವಿರುದ್ಧವೂ ಗೆಲುವು ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry