ಸ್ನೂಕರ್: ಫೈನಲ್‌ಗೆ ಮೆಹ್ತಾ, ಚಾವ್ಲಾ

7

ಸ್ನೂಕರ್: ಫೈನಲ್‌ಗೆ ಮೆಹ್ತಾ, ಚಾವ್ಲಾ

Published:
Updated:

ಪುಣೆ: ಕಳೆದ ಬಾರಿಯ ಚಾಂಪಿಯನ್ ಆದಿತ್ಯ ಮೆಹ್ತಾ ಮತ್ತು ಕಮಲ್ ಚಾವ್ಲಾ ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸ್ನೂಕರ್ ಚಾಂಪಿಯನ್‌ಷಿಪ್‌ನ ಫೈನಲ್ ಪ್ರವೇಶಿಸಿದರು.

ಪಿವೈಸಿ ಹಿಂದು ಜಿಮ್ಖಾನಾ ಹಾಲ್‌ನಲ್ಲಿ ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಏಷ್ಯನ್ `ರನ್ನರ್ ಅಪ್~ ಮೆಹ್ತಾ 71-43, 75-1, 105-7, 70-20, 30-69, 28-61, 33-71, 38-67, 86-1 ರಲ್ಲಿ ಪಿಎಸ್‌ಪಿಬಿಯ ಶಹಬಾಜ್ ಆದಿಲ್ ಖಾನ್ ವಿರುದ್ಧ ಗೆಲುವು ಪಡೆದರು.

ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಪಂಕಜ್ ಅಡ್ವಾಣಿ ಅವರಿಗೆ ಸೋಲುಣಿಸಿದ್ದ ಶಹಬಾಜ್ ಗೆಲುವಿಗಾಗಿ ಕಠಿಣ ಪ್ರಯತ್ನ ನಡೆಸಿದರು. ಆದರೆ ನಿರ್ಣಾಯಕ ಫ್ರೇಮ್‌ನಲ್ಲಿ ಮೆಹ್ತಾ ಸೊಗಸಾದ ಪ್ರದರ್ಶನ ನೀಡಿ ಗೆಲುವು ತಮ್ಮದಾಗಿಸಿಕೊಂಡರು.

ಫೈನಲ್‌ನಲ್ಲಿ ಅವರು ರೈಲ್ವೇಸ್‌ನ ಕಮಲ್ ಚಾವ್ಲಾ ಜೊತೆ ಪೈಪೋಟಿ ನಡೆಸುವರು. ದಿನದ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಚಾವ್ಲಾ 70-7, 19-64, 35-70, 67-32, 90-15, 103-0, 70-45 ರಲ್ಲಿ ಬಂಗಾಳದ ಬ್ರಿಜೇಶ್ ದಮನಿ ಅವರನ್ನು ಮಣಿಸಿದರು.

ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೆಹ್ತಾ 84-1, 67-34, 85-0, 80-7, 76 -23 ರಲ್ಲಿ ರೈಲ್ವೇಸ್‌ನ ಸಿದ್ಧಾರ್ಥ್ ಪಾರಿಖ್ ವಿರುದ್ಧ ಗೆಲುವು ಪಡೆದಿದ್ದರೆ, ಚಾವ್ಲಾ 42-44, 66-30, 13-68, 68-25, 66-22, 23-108, 90-0, 56-5 ರಲ್ಲಿ ಆಂಧ್ರ ಪ್ರದೇಶದ ಲಕ್ಕಿ ವತ್ನಾನಿ ಅವರನ್ನು ಸೋಲಿಸಿದ್ದರು.

ಶಹಬಾಜ್ 94-33, 67-33, 29-71, 62-52, 0-69, 22-58, 70-42, 72-16 ರಲ್ಲಿ ಆಂಧ್ರ ಪ್ರದೇಶದ ಹಿಮಾಂಶು ಜೈನ್ ಎದುರೂ, ಬ್ರಿಜೇಶ್ ದಮನಿ 90-8, 27-62, 41-84, 77-22, 91-18, 59-49, 58-50 ರಲ್ಲಿ ಪಿಎಸ್‌ಪಿಬಿಯ ಮನನ್ ಚಂದ್ರ ಮೇಲೂ ಜಯ ಸಾಧಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry