ಸ್ನೂಕರ್: ಮಿಥುನ್‌ಗೆ ಜಯ

7

ಸ್ನೂಕರ್: ಮಿಥುನ್‌ಗೆ ಜಯ

Published:
Updated:

ಬೆಂಗಳೂರು: ವಿ. ಮಿಥುನ್, ಇಂಡಿಯನ್ ಓಪನ್ ಸ್ನೂಕರ್ ಟೂರ್ನಿಯ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದರು.ಕರ್ನಾಟಕ ಬಿಲಿಯರ್ಡ್ಸ್ ಸಂಸ್ಥೆಯಲ್ಲಿ ಭಾನುವಾರ ಆರಂಭವಾದ ಸ್ಪರ್ಧೆಗಳಲ್ಲಿ ಮಿಥುನ್ 4-0ರಲ್ಲಿ ತಮಿಳುನಾಡಿನ ಗಜೇಂದ್ರನ್ ಎದುರು ಗೆಲುವು ಸಾಧಿಸಿದರು. ಇನ್ನುಳಿದಂತೆ ರಾಷ್ಟ್ರೀಯ ಆಟಗಾರರಾದ ರಿಷಬ್ ಪಾಂಡೆ, ಪ್ರೇಮ್ ಕುಮಾರ್, ಜೆ. ಶ್ಯಾಮ್, ಹರೀಶ್ ಗಾಂಧಿ ಅವರು ಎರಡನೇ ಸುತ್ತಿಗೆ ಸುಲಭವಾಗಿ ಮುನ್ನಡೆದರು.ಮಹಾರಾಷ್ಟ್ರದ ರಿಷಿಬ್ 4-0ರಲ್ಲಿ ಕರ್ನಾಟಕದ ಕೆ. ನಿರಂಜನ್ ಅವರನ್ನು ಮಣಿಸಿದರೆ, ರಾಜ್ಯದ ಸ್ಪರ್ಧಿಗಳಾದ ಜಿ. ಗಿರೀಶ್ 4-1ರಲ್ಲಿ ಎಸ್. ರೋಹಿತ್ ಮೇಲೂ, ಎಚ್.ಇ. ಆನಂದ್ 4-2ರಲ್ಲಿ ಒಡಿಶಾದ ಅಸಂತುಷ್ ಪಿ. ವಿರುದ್ಧವೂ, ಎಲ್. ನಾಗರಾಜ್ 4-1ರಲ್ಲಿ ತಮಿಳುನಾಡಿನ ಶರಣ್‌ರಾಜ್ ಮೇಲೂ, ಸುನಿಲ್ ಶರ್ಮ 4-2ರಲ್ಲಿ ಮಹಾರಾಷ್ಟ್ರದ ಪ್ರಾಥಮೇಶ್ ಸಾವಂತ್ ವಿರುದ್ಧವೂ, ಬಾಲಾಜಿ ರೆಡ್ಡಿ 4-0ರಲ್ಲಿ ಅಶುತೋಷ್ ಮೇಲೂ ಗೆಲುವು ಸಾಧಿಸಿ ಅರ್ಹತಾ ಹಂತದಲ್ಲಿ ಎರಡನೇ ಸುತ್ತು ಪ್ರವೇಶಿಸಿದರು.ರಾಜ್ಯದ ಇನ್ನಷ್ಟು ಸ್ಪರ್ಧಿಗಳಾದ ಜಾಸೀಮ್ ತಾವಿನ್ 4-1ರಲ್ಲಿ ಮಹಾರಾಷ್ಟ್ರದ ಯೋಗೇಶ್ ಶರ್ಮ ಮೇಲೂ, ನಿಹಾಲ್ ವಾಧವ್ 4-3ರಲ್ಲಿ ಆಂಧ್ರ ಪ್ರದೇಶದ ಕಾಜೀರ್ ರವೂಫ್ ವಿರುದ್ಧವೂ, ಎ.ಆರ್. ಅರ್ಜುನ್ 4-0ರಲ್ಲಿ ಎಂ. ಲೆನಿಮವಲ್ ಮೇಲೂ ಜಯ ಸಾಧಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry