ಸ್ನೇಹದ ಬ್ಯಾಂಡ್

ಶನಿವಾರ, ಮೇ 25, 2019
32 °C

ಸ್ನೇಹದ ಬ್ಯಾಂಡ್

Published:
Updated:
ಸ್ನೇಹದ ಬ್ಯಾಂಡ್

ಸ್ನೇಹಿತರಿಲ್ಲದ ಜೀವನ ಅಪೂರ್ಣವೇ ಸರಿ. ನೆಚ್ಚಿನ ಗೆಳೆಯ-ಗೆಳತಿಗೆ ಫ್ರೆಂಡ್‌ಶಿಪ್ ಬ್ಯಾಂಡ್ ಕಟ್ಟಿ ಅವರೊಂದಿಗೆ ಕೆಲಕ್ಷಣ ಸಂತಸದಿಂದ ಕಳೆಯಲು ಸ್ನೇಹಿತರ ದಿನ ಪ್ರಶಸ್ತವಾದದ್ದು. ಅಪೂರ್ವ ಗೆಳೆತನವನ್ನು ಜನಪ್ರಿಯಗೊಳಿಸುವುದಕ್ಕಾಗಿ ಮತ್ತು ಆ ದಿನವನ್ನು ನೆನಪಿನಲ್ಲಿಡುವ ಉದ್ದೇಶದಿಂದ 92.7 ಬಿಗ್ ಎಫ್‌ಎಂ ಸ್ಯಾಂಡಲ್‌ವುಡ್ ತಾರೆಯಾದ ನೀತು ಮತ್ತು ವಿಶಾಲ್ ಹೆಗ್ಡೆ ಅವರನ್ನು ಆಹ್ವಾನಿಸಿತ್ತು.ಜತೆಗೆ  ಗಂಗಮ್ಮ ಹೊಂಬೇಗೌಡ ಬಾಲಕಿಯರ ಪ್ರೌಢಶಾಲೆ ಮಕ್ಕಳು ಬಂದಿದ್ದರು.

ತಾರೆಗಳಿಬ್ಬರೂ ಮಕ್ಕಳಿಗೆ ಬ್ಯಾಂಡ್ ಕಟ್ಟಿದರು. ಅವರಿಂದ ಸ್ನೇಹದ ದಾರವನ್ನು ಕಟ್ಟಿಸಿಕೊಳ್ಳುವಾಗ ವಿದ್ಯಾರ್ಥಿಗಳ ಎದೆಯಲ್ಲಿ ಸಂತಸದ ಬುಗ್ಗೆ.ನೀತು ಮತ್ತು ವಿಶಾಲ್ ಕೂಡ ಮಕ್ಕಳೊಂದಿಗೆ ತಮ್ಮ ನೆನಪುಗಳನ್ನು ಮೆಲುಕು ಹಾಕಿದರು. ವಿದ್ಯಾರ್ಥಿಗಳು ತಮ್ಮ ಇಷ್ಟದ ತಾರೆಯರನ್ನು ನೋಡಿ ಖುಷಿಪಟ್ಟರು. ಅವರಿಗೆ ಪ್ರೀತಿಯಿಂದ ಬ್ಯಾಂಡ್ ಕಟ್ಟಿ ಸ್ನೇಹಿತರ ದಿನವನ್ನು ಮಧುರವಾಗಿಸಿಕೊಂಡರು. ಈ ಮೂಲಕ 92.7 ಬಿಗ್ ಎಫ್‌ಎಂ ಸ್ನೇಹಿತರ ದಿನವನ್ನು ವಿಶಿಷ್ಟವಾಗಿ ಆಚರಿಸಿಕೊಂಡಿತು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry