ಬುಧವಾರ, ಜೂನ್ 16, 2021
21 °C

ಸ್ನೇಹಿತನ ಕೊಲೆ ಮಾಡಿದ ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸ್ನೇಹಿತನನ್ನು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಇಬ್ಬರು ಆರೋಪಿಗಳಲ್ಲಿ ಒಬ್ಬನನ್ನು ಆಡುಗೋಡಿ ಪೊಲೀಸರು ಗುರುವಾರ ರಾತ್ರಿ ಬಂಧಿಸಿದ್ದಾರೆ.ಹೊಂಗಸಂದ್ರ ನಿವಾಸಿ ಡ್ಯಾನಿಯಲ್(26) ಬಂಧಿತ ಆರೋಪಿ. ಮೊದಲು ಲಕ್ಕಸಂದ್ರದಲ್ಲಿ ವಾಸವಾಗಿದ್ದ ಡ್ಯಾನಿಯಲ್, ತನ್ನ ಸ್ನೇಹಿತ ಸುನಿಲ್‌ನೊಂದಿಗೆ ಸೇರಿಕೊಂಡು ಕಳೆದ ನ.25 ರಂದು ಕೃಷ್ಣ (25) ಎಂಬುವರನ್ನು ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದನು ಎಂದು ಪೊಲೀಸರು ತಿಳಿಸಿದರು.`ಡ್ಯಾನಿಯಲ್ ಹಾಗೂ ಕೃಷ್ಣ ಸ್ನೇಹಿತರಾಗಿದ್ದು, ಇಬ್ಬರೂ ಮಾದಕ ವ್ಯಸನಿಯಾಗಿದ್ದರು. ಆಗಾಗ ಡ್ಯಾನಿಯಲ್‌ನ ಮನೆಗೆ ಹೋಗುತ್ತಿದ್ದ ಕೃಷ್ಣ ನ.10 ರಂದು ಅವನ ಮನೆಗೆ ಹೋಗಿ, ಡ್ಯಾನಿಯಲ್‌ನ ಪತ್ನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು. ಇದರಿಂದ ಕೋಪಗೊಂಡ ಡ್ಯಾನಿಯಲ್, ಕೃಷ್ಣ ಅವರನ್ನು ಕೊಲೆ ಮಾಡಲು ನಿರ್ಧರಿಸಿದ್ದ~ ಎಂದು ಆಡುಗೋಡಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟ್ರರ್ ಆರ್.ಮಂಜುನಾಥ್ ಹೇಳಿದರು.`ನ.25 ರಂದು ಕೃಷ್ಣ ಅವರಿಗೆ ಹೆಚ್ಚಿನ ಮಾದಕ ವಸ್ತು ನೀಡಿದ್ದಾರೆ. ಮತ್ತು ಬಂದ ನಂತರ ಡ್ಯಾನಿಯಲ್ ಹಾಗೂ ಅವನ ಸ್ನೇಹಿತ ಸುನಿಲ್, ಕೃಷ್ಣ ಅವರನ್ನು ತಲಘಟ್ಟಪುರಕ್ಕೆ ಕರೆದೊಯ್ದು ಅಲ್ಲಿ ಮಚ್ಚಿನಿಂದ ಹೊಡೆದಿದ್ದಾರೆ. ನಂತರ ಶವವನ್ನು ಅರೆಬರೆ ಸುಟ್ಟು, ದೇಹವನ್ನು ಚೀಲದಲ್ಲಿ ತುಂಬಿಕೊಂಡು ಕೆಂಗೇರಿ ಮೋರಿಯಲ್ಲಿ ಎಸೆದಿದ್ದರು~ ಎಂದು ಇನ್‌ಸ್ಪೆಕ್ಟರ್ ಮಾಹಿತಿ ನೀಡಿದರು.ಪತಿ ಕಾಣೆಯಾಗಿರುವುದಾಗಿ ಕೃಷ್ಣ ಅವರ ಪತ್ನಿ ದೂರು ನೀಡಿದ್ದರು. ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಪ್ರಕರಣ ದಾಖಲಿಸಿಕೊಂಡಿದ್ದು, ಮತ್ತೊಬ್ಬ ಆರೋಪಿಯಾದ ಸುನಿಲ್‌ನ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಅವರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.