ಮಂಗಳವಾರ, ಮೇ 11, 2021
24 °C

ಸ್ನೇಹಿತರಿಂದ ವಿದ್ಯಾರ್ಥಿ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುಣೆ (ಪಿಟಿಐ): ಟಿವಿಯಲ್ಲಿ ಪ್ರಸಾರವಾದ ಅಪರಾಧ ಆಧಾರಿತ ಧಾರಾವಾಹಿಯಿಂದ ಪ್ರಭಾವಿತರಾದ ವಿದ್ಯಾರ್ಥಿಗಳು ತಮ್ಮ ಸ್ನೇಹಿತನನ್ನೇ ಅಪಹರಿಸಿ ಕೊಲೆಗೈದಿರುವ ದುರಂತ ಶನಿವಾರ ಸಂಭವಿಸಿದೆ.

ಹತ್ತನೇ ತರಗತಿ ಶುಭಂ ಶಿರ್ಕೆ (16) ಎಂಬಾತನೇ ಕೊಲೆಗೀಡಾದ ವಿದ್ಯಾರ್ಥಿ. ಇತನನ್ನು ಅಪಹರಿಸಿದ ವಿದ್ಯಾರ್ಥಿಗಳಲ್ಲಿ ಇಬ್ಬರು ಅಪ್ರಾಪ್ತರಾಗಿದ್ದು, ಬಿಡುಗಡೆಗೆ 50 ಸಾವಿರ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದರು.

ಶುಭಂನನ್ನು ಶನಿವಾರ ಇಲ್ಲಿನ ದಿಗಿ ಪ್ರದೇಶದಿಂದ ಅಪಹರಿಸಿ ಎತ್ತರದ ಪ್ರದೇಶಕ್ಕೆ ಕೊಂಡೊಯ್ದು ಕತ್ತು ಹಿಸುಕಿ ಕೊಲೆಗೈದಿದ್ದಾರೆ. ನಂತರ ಶುಭಂ ತಂದೆಗೆ ಕರೆ ಮಾಡಿದ ಆರೋಪಿಗಳು, 50 ಸಾವಿರ ರೂಪಾಯಿ ನೀಡುವಂತೆ ಬೇಡಿಕೆಯಿಟ್ಟರು.ಶುಭಂ ತಂದೆ ಪೊಲೀಸರಿಗೆ ದೂರು ನೀಡಿದ ಬಳಿಕ ಕಾರ್ಯಪ್ರವೃತ್ತರಾದ ಪೊಲೀಸರು, ಶುಭಂನ ಇಬ್ಬರು ಸಹಪಾಠಿಗಳು ಸೇರಿ ಮೂವರನ್ನು ಬಂಧಿಸಿದರು. ಬಂಧಿತರ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ.

 ಐಷಾರಾಮಿ ಜೀವನಕ್ಕಾಗಿ ಈ ಹಣ ಬಳಸಲು ಅವರು ಯೋಜಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.