ಸ್ನೇಹಿತೆಯ ಮುಖ ಸುಟ್ಟ ಸ್ನೇಹಿತ

7

ಸ್ನೇಹಿತೆಯ ಮುಖ ಸುಟ್ಟ ಸ್ನೇಹಿತ

Published:
Updated:

ಪಟ್ನಾ: ‘ಫೇಸ್‌ಬುಕ್’ನ ಸ್ನೇಹಿತರ ಪಟ್ಟಿಯಿಂದ ತೆಗೆದುಹಾಕಿದ್ದಕ್ಕೆ ಕೋಪ­ಗೊಂಡ  ಯುವಕ ಬಾಲಕಿಯ ಮುಖಕ್ಕೆ ಬಿಸಿನೀರು ಎರಚಿ ಸುಟ್ಟ ಘಟನೆ ಬಿಹಾರದ ಮುಜಾಫರ್‌­ಪುರ ಜಿಲ್ಲೆಯಲ್ಲಿ ನಡೆದಿದೆ.ಘಟನೆಯ ವಿವರ: ಯುಧಿಷ್ಠರ ಎಂಬ ಕಾಲೇಜು ವಿದ್ಯಾರ್ಥಿ, ಶಿಕ್ಷಕರೊಬ್ಬರ ಮನೆಯಲ್ಲಿ ಪಾಠ ಹೇಳಿಸಿಕೊಳ್ಳುತ್ತಿದ್ದ. 8ನೇ ತರಗತಿ ಓದುತ್ತಿದ್ದ ಶಿಕ್ಷಕರ ಮಗಳ ಸ್ನೇಹ ಗಳಿಸಿದ ಯುಧಿಷ್ಠರ, ನಂತರ ಬಾಲಕಿಯ ‘ಫೇಸ್‌ಬುಕ್’ ಅಕೌಂಟಿಗೆ ಸ್ನೇಹದ ಕೋರಿಕೆ ಕಳುಹಿಸಿದ್ದ.ಬಾಲಕಿ ಕೋರಿಕೆಯನ್ನು ಒಪ್ಪಿಕೊಂಡಿದ್ದಳು. ಆದರೆ, ಬಾಲಕಿಯ ಖಾತೆಗೆ ಆಕ್ಷೇಪಾರ್ಹ ವಿಷಯ, ಚಿತ್ರಗಳನ್ನು ಕಳುಹಿಸತೊಡಗಿದ್ದರಿಂದ ಬಾಲಕಿ ಇದನ್ನು ಮುಂದುವರಿಸದಂತೆ ಯುವಕನಿಗೆ ತಿಳಿಸಿದರೂ, ಕೇಳದ ಯುವಕ ಆಕ್ಷೇಪಾರ್ಹ ಸಂಗತಿಗಳನ್ನು ಕಳುಹಿ­ಸು­ವು­ದನ್ನು ಮುಂದುವರಿಸಿ­ದಾಗ ಬಾಲಕಿ ಸ್ನೇಹಿತರ ಪಟ್ಟಿಯಿಂದ ಆತನನ್ನು ಕೈಬಿಟ್ಟಿದ್ದಾಳೆ.ಈ ವಿಷಯ ತಿಳಿದ ಯುವಕ ತನ್ನ ಗುರುತಿನ ಚೀಟಿ ಕಳೆದುಹೋಗಿದೆ ಎಂದು ಹುಡುಕುವ ನೆಪದಲ್ಲಿ ಬಾಲಕಿ­ಯ ಮನೆ  ಪ್ರವೇಶಿಸಿದ್ದಾನೆ. ಆಗ ಅಡುಗೆಮನೆಯಲ್ಲಿ ಕುದಿಯಲು ಇಟ್ಟಿದ್ದ ಬಿಸಿನೀರಿನ ಪಾತ್ರೆಯನ್ನು ಬಾಲಕಿ­ಯ ಮುಖಕ್ಕೆ ಎರಚಿ ಪರಾರಿ­ಯಾಗಿದ್ದಾನೆ.ಬಾಲಕಿಯ ಮುಖದ ಶೇಕಡಾ 20ರಷ್ಟು ಭಾಗ ಸುಟ್ಟುಹೋಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸ­ಲಾಗಿದೆ.  ಕೃತ್ಯ ಎಸಗಿದ ಆರೋಪಿ ಊರು ತೊರೆದಿದ್ದು, ಆತನ ಬಂಧನಕ್ಕೆ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry