ಸೋಮವಾರ, ಮೇ 23, 2022
24 °C

ಸ್ನೊಡೆನ್ ಮಾಸ್ಕೊ ಬಿಡಲಾರ: ರಫೆಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೆರ್ಟೊ (ಈಕ್ವೆಡಾರ್) (ಎಪಿ): ಸದ್ಯ ರಷ್ಯಾದಲ್ಲಿರುವ ಎಡ್ವೆರ್ಡ್ ಸ್ನೊಡೆನ್, ಅಮೆರಿಕದ ಪಾಸ್‌ಪೋರ್ಟ್ ಇಲ್ಲದೆ ಮಾಸ್ಕೊ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಲಾರರು ಎಂದು ಈಕ್ವೆಡಾರ್ ಅಧ್ಯಕ್ಷ ರಫೆಲ್ ಕೊರಿಯಾ ಸೋಮವಾರ ಹೇಳಿದ್ದಾರೆ.ಸ್ನೊಡೆನ್ ಎಲ್ಲಿಗೆ ಹೋಗಲು ಬಯಸುತ್ತಾರೆ ಎಂಬುದು ತಮಗೆ ತಿಳಿದಿಲ್ಲ. ಸ್ನೊಡೆನ್‌ಗೆ ಈಕ್ವೆಡಾರ್ ರಾಜಕೀಯ ಆಶ್ರಯ ನೀಡಲು ಸಿದ್ಧವಿದೆ ಎಂಬ ಹೇಳಿಕೆಯು ಲಂಡನ್ನಿನಲ್ಲಿರುವ ತಮ್ಮ ದೇಶದ ರಾಯಭಾರಿ ಕಚೇರಿಯಿಂದ ಆದ ದೊಡ್ಡ ಪ್ರಮಾದ. ರಾಯಭಾರ ಕಚೇರಿಯವರು ಸರ್ಕಾರವನ್ನು ಸಂಪರ್ಕಿಸದೆ ಈ ಅಸಂಬದ್ಧ ಹೇಳಿಕೆ ನೀಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.`ಈ ಪ್ರಕರಣ ನಮ್ಮ (ಈಕ್ವೆಡಾರ್) ಕೈಯಲ್ಲಿ ಇಲ್ಲ. ಸ್ನೊಡೆನ್ ತಮ್ಮ ನೆಲದ (ಅಮೆರಿಕ) ಕಾನೂನು ಉಲ್ಲಂಘಿಸಿದ್ದರೆ ಅದನ್ನು ಅವರು ಒಪ್ಪಿಕೊಳ್ಳಬೇಕು. ಆದರೂ ಅವರಿಗೆ ಮಾನವೀಯ ನೆಲೆಯಲ್ಲಿ ರಕ್ಷಣೆ ನೀಡುವ ವಿಚಾರವನ್ನು ಪರಿಗಣಿಸಲಾಗುವುದು. ಅದಕ್ಕೂ ಮೊದಲು ಅವರು ಆಶ್ರಯ ನೀಡುವಂತೆ ಸರ್ಕಾರಕ್ಕೆ ಇಲ್ಲವೆ ಈಕ್ವೆಡಾರ್ ರಾಯಭಾರ ಕಚೇರಿಗೆ ಮನವಿ ಸಲ್ಲಿಸಬೇಕು' ಎಂದಿದ್ದಾರೆ. `ಸ್ನೊಡೆನ್ ಬಳಿ ಪಾಸ್‌ಪೋರ್ಟ್ ಇಲ್ಲ ಎಂದು ರಷ್ಯಾದ ಆಡಳಿತ ಹೇಳಿದೆ. ಆದರೆ ಆ ನೆಲದ ಕಾನೂನಿನ ಬಗ್ಗೆ ನನಗೆ ತಿಳಿದಿಲ್ಲ' ಎಂದೂ ಅವರು ತಿಳಿಸಿದ್ದಾರೆ.ಭವಿಷ್ಯ ನಿರ್ಧರಿಸಿಲ್ಲ: ರಷ್ಯಾ

ಮಾಸ್ಕೊ (ಐಎಎನ್‌ಎಸ್): ಅಂತರ್ಜಾಲದ ಮೂಲಕ ಅಮೆರಿಕ ಕದ್ದಿರುವ ರಹಸ್ಯ ಮಾಹಿತಿಗಳನ್ನು ಬಹಿರಂಗ ಪಡಿಸಿದ ಆರೋಪಕ್ಕೆ ಗುರಿಯಾದ ಎಡ್ವರ್ಡ್ ಸ್ನೊಡೆನ್ ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಂದು ವಾರಗಳ ಕಾಲ ಇದ್ದರು. ಆದರೆ, ಅವರ ಭವಿಷ್ಯದ ಕುರಿತು ಏನನ್ನೂ ಚಿಂತಿಸಿಲ್ಲ ಎಂದು ರಷ್ಯಾ ಹೇಳಿದೆ.`ಸ್ನೊಡೆನ್‌ಗೆ ಆಶ್ರಯ ನೀಡುವ ವಿಚಾರವು ಕ್ರೆಮ್ಲಿನ್ (ಅಧ್ಯಕ್ಷರ ಭವನ) ಕಾರ್ಯಸೂಚಿಯಲ್ಲಿ ಇಲ್ಲ' ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆಂದು ಕ್ರೆಮ್ಲಿನ್ ವಕ್ತಾರರು ಸ್ಥಳೀಯ ರೇಡಿಯೊದಲ್ಲಿ ತಿಳಿಸಿರುವುದಾಗಿ `ಕ್ಸಿನ್‌ಹುವಾ' ವರದಿ ಮಾಡಿದೆ.

`ಸ್ನೊಡೆನ್ ವಿಷಯದಲ್ಲಿ ಸಾರ್ವಜನಿಕ ಅಭಿಪ್ರಾಯವು ಭಿನ್ನ ರೀತಿಯಲ್ಲಿದೆ' ಎಂದು ವಕ್ತಾರರು ತಿಳಿಸಿದ್ದಾರೆ.ಭಾರತದ ಮಾಹಿತಿಗೂ ಕನ್ನ

ಲಂಡನ್/ವಾಷಿಂಗ್ಟನ್ (ಪಿಟಿಐ):
ಭಾರತದ ದೂತಾವಾಸ ಸೇರಿ 38 ರಾಯಭಾರ ಕಚೇರಿಗಳ ಅಂತರ್ಜಾಲ ತಾಣ ಮತ್ತು ದೂರವಾಣಿ ಜಾಲಕ್ಕೆ ಅಮೆರಿಕದ ಬೇಹುಗಾರಿಕಾ ಸಂಸ್ಥೆಗಳು ಕನ್ನಹಾಕಿದ್ದವು ಎಂಬ ಮಾಹಿತಿಯು ಎಡ್ವೆರ್ಡ್ ಸ್ನೊಡೆನ್ ಬಹಿರಂಗ ಮಾಡಿರುವ ದಾಖಲೆ ಪಟ್ಟಿಯಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.