ಗುರುವಾರ , ನವೆಂಬರ್ 14, 2019
19 °C

ಸ್ಪರ್ಧಾತ್ಮಕ ನಿಯಮ ಉಲ್ಲಂಘನೆ; ರೂ.8ಸಾವಿರ ದಂಡ

Published:
Updated:

ನವದೆಹಲಿ (ಪಿಟಿಐ): ಉದ್ಯಮ ವಲಯ ಮತ್ತು ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ನೀತಿ ಕಾಯ್ದುಕೊಳ್ಳುವತ್ತ ನಿರಂತರ ನಿಗಾ ವಹಿಸಿರುವ `ಭಾರತೀಯ ಸ್ಪರ್ಧಾತ್ಮಕ ಆಯೋಗ'(ಸಿಸಿಐ), 2012-13ನೇ ಹಣಕಾಸು ವರ್ಷದಲ್ಲಿ ನಿಯಮ ಪಾಲಿಸದ 19 ಪ್ರಕರಣಗಳಲ್ಲಿ ರೂ.8000 ಕೋಟಿಗೂ ಅಧಿಕ ಮೊತ್ತದ ದಂಡ ವಿಧಿಸಿದೆ.2012ರ ಏ. 1ರಿಂದ 2013ರ ಮಾ. 31ರವರೆಗೆ ಸ್ಪರ್ಧಾತ್ಮಕ ನೀತಿ ಪಾಲಿಸದೆ ನಿಯಮಗಳನ್ನು ಉಲ್ಲಂಘಿಸಿದ್ದ ಒಟ್ಟು 347 ಪ್ರಕರಣಗಳನ್ನು ದಾಖಲಿಸಲಾಗಿತ್ತು. 262 ಪ್ರಕರಣಗಳನ್ನು ವಿಚಾರಣೆ ನಡೆಸಿ ಕೊನೆಗೊಳಿಸಲಾಗಿದೆ. 19 ಪ್ರಕರಣಗಳಲ್ಲಿ ಮಾತ್ರ ರೂ.8013 ಕೋಟಿಯಷ್ಟು ಭಾರಿ ದಂಡ ವಿಧಿಸಲಾಗಿದೆ ಎಂದು ಕಂಪೆನಿ ವ್ಯವಹಾರಗಳ ಸಚಿವ ಸಚಿನ್ ಪೈಲಟ್ ಸೋಮವಾರ ರಾಜ್ಯಸಭೆಗೆ ಲಿಖಿತ ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)