ಬುಧವಾರ, ಏಪ್ರಿಲ್ 14, 2021
24 °C

ಸ್ಪರ್ಧಾತ್ಮಕ ಪರೀಕ್ಷೆ 2011 ಸಿದ್ಧತೆ ಹೇಗಿರಬೇಕು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ಪ ರ್ಧಾತ್ಮಕ ಪರೀಕ್ಷೆಗಳ ಸಮಯ ಇದು. ಇತರರೊಂದಿಗೆ ಹೋಲಿಕೆ, ಪೋಷಕರ ನಿರೀಕ್ಷೆ ಮತ್ತು ತೀವ್ರ ಒತ್ತಡ, ಪ್ರವೇಶ ಪರೀಕ್ಷೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಪ್ರಮುಖ ಕಾಳಜಿಯ ವಿಷಯ.ಕೊನೆಯ ಕ್ಷಣಗಳಲ್ಲಿ ಯಾವುದನ್ನು ಮಾಡಬೇಕು, ಮಾಡಬಾರದು ಎಂಬ ಬಗ್ಗೆ ಇಲ್ಲಿ ಸಲಹೆಗಳನ್ನು ನೀಡಲಾಗಿದೆ. ಹಿಂದಿನ ಪ್ರಶ್ನೆಪತ್ರಿಕೆಗಳನ್ನು ನಿರ್ವಹಿಸಿ: ನಿಮಗೆ ಎಷ್ಟು ಸಾಧ್ಯವೋ ಅಷ್ಟೂ ಉತ್ತಮ.ಸಿಇಟಿ/ಎಐಇಇಇಗೆ ಸಿದ್ಧತೆ ಮಾಡಿಕೊಳ್ಳುತ್ತಿರುವವರು ಪಾಠಗಳನ್ನು ಉತ್ತಮವಾಗಿ ಪುನರ್ ಮನನ ಮಾಡಿಕೊಳ್ಳಿ ಅಥವಾ ದಿನಕ್ಕೊಂದು ಪ್ರಶ್ನೆಪತ್ರಿಕೆಗೆ ಉತ್ತರಿಸಿ. ಹೆಚ್ಚು ‘ಮಾಕ್’ ಟೆಸ್ಟ್‌ಗಳನ್ನು ತೆಗೆದುಕೊಂಡರೆ, ನೀವು ಸಮಯವನ್ನು ನಿರ್ವಹಿಸಲು ನೆರವಾಗುತ್ತದೆ.ನಿದ್ದೆ  ಅವಧಿ

ನಿಮ್ಮ ಪರೀಕ್ಷೆ ಸಮಯಕ್ಕೆ ಸರಿಯಾಗುವಂತೆ ನಿಮ್ಮ ಬಯೊ-ಕ್ಲಾಕ್ ನಿಗದಿಪಡಿಸಿಕೊಳ್ಳುವುದು ಅತ್ಯಂತ ಪ್ರಮುಖವಾಗಿದ್ದು, ಈ ಮೂಲಕ ನಿಮ್ಮ ದೇಹ ಮತ್ತು ಮನಸ್ಸು ಚಟುವಟಿಕೆಯಿಂದಿರಲು ನೆರವಾಗುತ್ತದೆ. ಕಡೇ ಗಳಿಗೆಯಲ್ಲಿ ಸಾಧ್ಯವಾದದ್ದನ್ನೆಲ್ಲಾ ಓದಿ ಮನದಲ್ಲಿ ತುಂಬಿಕೊಳ್ಳುವುದು ನಿಮ್ಮ ಶೈಲಿಯಾಗಿರಬಹುದು. ಹೀಗಿದ್ದೂ ರಾತ್ರಿ ನಿದ್ದೆ ಕೊರತೆಯಾಗದಂತೆ ನೋಡಿಕೊಳ್ಳಿ. ಉತ್ತಮವಾಗಿ ಕಾರ್ಯ ನಿರ್ವಹಿಸಲು ದೇಹಕ್ಕೆ ಏಳು ಗಂಟೆಗಳ ನಿದ್ದೆ ಕಡ್ಡಾಯ. ಅಲ್ಲದೆ, ನಿದ್ದೆಯನ್ನು ನಿಗದಿತ ಸಮಯದಲ್ಲಿ ಮಾಡಿ; ನಿಮ್ಮ ನಿದ್ದೆಯ ಸಮಯವನ್ನು ಬದಲಿಸಿಕೊಳ್ಳಬೇಡಿ.ಆರೋಗ್ಯಕರ ಆಹಾರ ಸೇವಿಸಿ

ಹಸಿರು ತರಕಾರಿ ಮತ್ತು ತಾಜಾ ಹಣ್ಣುಗಳ ಆರೋಗ್ಯಕರ ಡಯಟ್ ನೀವು ಸದಾ ಎಚ್ಚರದಿಂದಿರಲು ನೆರವಾಗುತ್ತದೆ. ಕಾರ್ಬೊನೇಟೆಡ್ ಪೇಯಗಳನ್ನು ಸೇವಿಸಬೇಡಿ ಮತ್ತು ಕೆಫೀನ್ ಹೆಚ್ಚು ಸೇವಿಸಬೇಡಿ. ಬೇಸಿಗೆಯ ಬಿಸಿಲೂ ಏರುತ್ತಿದೆ. ನಿಮ್ಮ ಅಧ್ಯಯನ ತಂಪು ವಾತಾವರಣದಲ್ಲಿರುವಂತೆ ಖಾತರಿಪಡಿಸಿಕೊಳ್ಳಿ. ದೇಹ ತಂಪಾಗಿರಲು  ನೀರು ಅಥವಾ ಇತರೆ ಪೇಯಗಳನ್ನು ಕುಡಿಯಲು ಮರೆಯದಿರಿ. ಈ ಮೂಲಕ ನಿಮ್ಮ ಪರೀಕ್ಷೆ ಅವಧಿಯಲ್ಲಿ ಕಾಯಿಲೆ ಬೀಳದಂತಿರಲು ಎಚ್ಚರ ವಹಿಸಿ. ನಮ್ಮ ದೇಹಸ್ಥಿತಿಗೆ ಹೊಂದಿಕೊಳ್ಳದ ವಸ್ತುಗಳನ್ನು ತಿನ್ನದಿರಿ. ನಿಯಮಿತ ಅವಧಿಗಳಲ್ಲಿ ಲಘು ಭೋಜನವನ್ನು ಮಾಡಿ.ಪೋಷಕರ ಬೆಂಬಲ ಮುಖ್ಯ

ಸಹಾಯಕ ವ್ಯವಸ್ಥೆಯಾಗಿ ಬೆಂಬಲಿಸಿ. ನಿಮ್ಮ ಸಹಕಾರ ಅವರು ಪರೀಕ್ಷೆ ಒತ್ತಡದಿಂದ ಹೊರಬರಲು ಖಂಡಿತ ನೆರವಾಗುತ್ತದಲ್ಲದೆ, ಪರೀಕ್ಷೆಯಲ್ಲಿ ಉತ್ತಮವಾಗಿ ನಿರ್ವಹಿಸಲು ನೆರವಾಗುತ್ತದೆ. ನಿಮ್ಮ ಮಕ್ಕಳಿಗೆ ಸಿಗುವಂತಿರಿ; ಅವರ ಪರೀಕ್ಷೆಗಿಂತ ಅವರ ಕ್ಷೇಮಾಭಿವೃದ್ಧಿ ಬಗ್ಗೆ ನಿಮಗೆ ಹೆಚ್ಚಿನ ಕಾಳಜಿ ಇದೆ ಎಂಬುದನ್ನು ಮರು ಖಾತರಿಗೊಳಿಸಿ. ಮನೆಗೆ ಬರುವ ಅತಿಥಿಗಳು ಅಥವಾ ಅವರ ಗಮನವನ್ನು ಸೆಳೆಯುವ ಯಾವುದೇ ಸಮಸ್ಯೆಗಳಾದ ಕೌಟುಂಬಿಕ ಆತಂಕಗಳಿಂದ ಅವರನ್ನು ದೂರವಿಡಿ.ಒತ್ತಡ ನಿವಾರಣೆ

ಮಾನಸಿಕ ಆತಂಕ ನಿವಾರಿಸಲು, ನಿಮ್ಮ ಮನಸ್ಸು ಗಮನವನ್ನು ಕಳೆದುಕೊಳ್ಳುತ್ತಿದೆ ಎಂದು ಅನ್ನಿಸಿದಾಗ ಅಲ್ಪ ವಿರಾಮ ತೆಗೆದುಕೊಳ್ಳಿ. ಈ ವಿರಾಮದಲ್ಲಿ ನಿಮ್ಮ ಅಧ್ಯಯನಕ್ಕೆ ತಡೆ ನೀಡದಿರುವಂತಹ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ. ಸ್ನೇಹಿತರೊಂದಿಗೆ ಮಾತನಾಡಿ, ಒಂದಷ್ಟು ಓಡಾಡಿ. ಟಿ.ವಿ ಮತ್ತು ಜೋರು ಸಂಗೀತದಿಂದ ದೂರವಿರಿ.ಕೆಲವು ಸಂದರ್ಭಗಳಲ್ಲಿ ಆಟವಾಡಿ. ವ್ಯಾಯಾಮ ಮಾಡುವುದೂ ಅತ್ಯುತ್ತಮ ಹಾದಿ. ಇದು ನಿಮ್ಮ ಗಮನವನ್ನು ಕೇಂದ್ರೀಕರಿಸುತ್ತದೆ ಮತ್ತು ಓದಲು ನಿಮ್ಮ ಮನಸ್ಸು ಉಲ್ಲಸಿತವಾಗುವಂತೆ ನೆರವಾಗುತ್ತದೆ. ಆರಾಮ ಪಡೆಯುವುದು ಮುಖ್ಯ. ನೀವು ಸರಿಯಾದ ಆರಾಮ ತೆಗೆದುಕೊಂಡರೆ ಮಾತ್ರ ನಿಮ್ಮ ಮನಸ್ಸು ಮತ್ತು ದೇಹ ಕಾರ್ಯನಿರ್ವಹಿಸುತ್ತದೆ.ಕೊನೆಯ 24 ಗಂಟೆಗಳು

* ನಿಮ್ಮ ಎಲ್ಲ ಪುಸ್ತಕಗಳನ್ನು ಪ್ಯಾಕ್ ಮಾಡಿ ಒಂದು ಕಡೆ ಇಡಿ. ಯಾವುದೇ ಹೊಸ ವಿಷಯವನ್ನು ಓದದಿರಿ. ಕೊನೆಯ ಕ್ಷಣದ ಓದನ್ನು ನಿಯಂತ್ರಿಸಿ.

* ಹಾಲ್ ಟಿಕೆಟ್, ಲೇಖನ ಸಾಮಗ್ರಿ ಇತ್ಯಾದಿಗಳು ಸೇರಿದಂತೆ ನಿಮ್ಮ ಪರೀಕ್ಷೆಗೆ ಅಗತ್ಯವಾದ ಎಲ್ಲವನ್ನೂ ಜೋಡಿಸಿಕೊಳ್ಳಿ.

* ಬೇಗನೆ ನಿದ್ದೆ ಮಾಡಿ.

* ಸದ್ಭಾವನೆಗಳಿರಲಿ ಮತ್ತು ವಿಶ್ವಾಸದಿಂದಿರಿ.

* ಬೇಗನೆ ಎದ್ದು, ಚುರುಕಾಗಿ.

*ಅರ್ಧ ಗಂಟೆ ಮುನ್ನವೇ ಪರೀಕ್ಷೆ ಕೊಠಡಿಗೆ ತಲುಪಿ. ಆರಾಮವಾಗಿರಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಮಾತನಾಡಿ.ಪರೀಕ್ಷೆಗಳ ನಂತರ:

ವೈಯಕ್ತಿಕವಾಗಿ ನೀವು ಹೇಗೆ ಭಾವಿಸಿಕೊಳ್ಳುತ್ತೀರಿ ಎಂಬುದರ ಮೇಲೆ ಪರೀಕ್ಷಾ ನಂತರ ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳುವುದು ಅವಲಂಬಿತವಾಗಿರುತ್ತದೆ. ಆತಂಕವನ್ನು ಹೇಗೆ ನಿಭಾಯಿಸಿದ್ದೀರಿ ಎಂಬುದು ಸೇರಿದಂತೆ ಪರೀಕ್ಷೆ ಸಮಯ ಮತ್ತು ಅದಕ್ಕೂ ಮುನ್ನ ನಿಮ್ಮ ಸಮಗ್ರ ಕ್ಷಮತೆಯಲ್ಲಿ ಯಾವುದು ಚೆನ್ನಾಗಿ ಆಯಿತು ಎಂಬುದರ ವಿಮರ್ಶೆ ಮಾಡಿ. ನಿಮ್ಮ ಮುಂದಿನ ಪರೀಕ್ಷೆಯಲ್ಲಿ ಇದನ್ನೆಲ್ಲ ಉತ್ತಮಪಡಿಸಿಕೊಳ್ಳುವ ಗುರಿ ಹೊಂದಿ. ನಿಮ್ಮ ಎಲ್ಲ ಪರೀಕ್ಷೆಗಳು ಮುಗಿದ ಮೇಲೆ ಸಂಭ್ರಮ ಆಚರಿಸಿ ಮತ್ತು ಮೋಜು ಮಾಡಿ. ಇನ್ನೂ ಕೆಲವು ಪ್ರವೇಶ ಪರೀಕ್ಷೆಗಳನ್ನು ಬರೆಯುವುದಿರುತ್ತಾದ್ದರಿಂದ ಒಂದು ದಿನದ ಮಟ್ಟಿಗೆ ಓದಿನಿಂದ ಆರಾಮವಾಗಿರಿ. ನಂತರ ಸಕಾರಾತ್ಮಕ ಭಾವನೆಯಿಂದ ಓದುವುದಕ್ಕೆ ತೊಡಗಿರಿ.

ಸಂಕ್ಷಿಪ್ತವಾಗಿ:

* ಬದ್ಧತೆಯಿಂದಿರಿ

* ನಿಮ್ಮ ಸಮಯವನ್ನು ಪರಿಣಾಮಕಾರಿಯಾಗಿ ಯೋಜಿಸಿ

* ನಿಮ್ಮ ಗ್ರೇಡ್ ಉತ್ತಮಗೊಳಿಸಿಕೊಳ್ಳುವ ಪ್ರತಿ ಪ್ರಯತ್ನಕ್ಕೂ ನಿಮ್ಮಷ್ಟಕ್ಕೇ ನೀವೇ ಉತ್ತೇಜಿಸಿಕೊಳ್ಳುವುದನ್ನು ನೆನಪಿನಲ್ಲಿಟ್ಟುಕೊಳ್ಳಿ.

* ವೈಫಲ್ಯದಿಂದ ನಿರುತ್ಸಾಹಿಗಳಾಗಿಬೇಡಿ, ನಿಮ್ಮ ದೌರ್ಬಲ್ಯಗಳನ್ನು ಮೀರುವತ್ತ ಗಮನಕೊಡಿ.

* ಆರೋಗ್ಯಕರವಾಗಿರಿ ಮತ್ತು ಆರಾಮವಾಗಿರಿ.

* ನಿಮ್ಮ ಗುರಿಯತ್ತ ಸಕಾರಾತ್ಮಕ ಭಾವನೆಯನ್ನು ಹೊಂದಿರಿ ಮತ್ತು ನೀವು ಏನನ್ನೇ ತೆಗೆದುಕೊಂಡರೂ ಅದರತ್ತ ಜವಾಬ್ದಾರಿಯುತವಾಗಿರಿ.ನೆನಪಿನಲ್ಲಿಟ್ಟುಕೊಳ್ಳಿ, ಯಶಸ್ಸಿಗೆ ಶಾರ್ಟ್‌ಕಟ್ ಇಲ್ಲ. ಸೋಮಾರಿಗಳಾಗಬೇಡಿ. ಯಾರಿಗೆ ಗುರಿ ಇಲ್ಲವೋ, ಯಾರು ಕಠಿಣ ಶ್ರಮಪಡುವುದಿಲ್ಲವೋ ಅವರತ್ತ ಯಶಸ್ಸು ಬರುವುದಿಲ್ಲ. ನಿಮ್ಮ ಭಾಗದ ಕೆಲಸ ಮಾಡಿ ಮತ್ತು ಯಾವುದೇ ರೀತಿಯ ಪರೀಕ್ಷೆಗೆ ನೀವು ಸಿದ್ಧರಿರುವ ಖಾತರಿ ಮಾಡಿಕೊಳ್ಳಿ.ನೀವು ಸಂದರ್ಭವನ್ನು ಬಳಸಿಕೊಳ್ಳಲು ಆಯ್ಕೆ ಮಾಡಿಕೊಂಡಿರಾದರೆ ಎಷ್ಟೇ ಆದರೂ, ಯಶಸ್ಸು ನಿಮ್ಮ ಬೆರಳ ತುದಿಯಲ್ಲಿರುತ್ತದೆ, ಮತ್ತು, ಹೌದು ಆ ಪರೀಕ್ಷೆಗಳೊಂದಿಗೆ ಅತಿ ಹೆಚ್ಚಿನ ಅದೃಷ್ಟಗಳಿರಲಿ.

(ಲೇಖಕರು ಏಸ್ ಕ್ರಿಯೇಟಿವ್ ಲರ್ನಿಂಗ್ ಸಂಸ್ಥಾಪಕರು)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.