ಮಂಗಳವಾರ, ಜನವರಿ 28, 2020
18 °C

ಸ್ಪರ್ಧಾ ಕಣದಲ್ಲಿ ರಿಕ್ಷಾ ಚಾಲಕ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮೃತಸರ (ಪಂಜಾಬ್) (ಪಿಟಿಐ): ರಿಕ್ಷಾ ತಳ್ಳುಗಾಡಿ ಎಳೆಯುವ 60 ವರ್ಷದ ಮಹೀಂದ್ರ ಸಿಂಗ್ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.ಪೂರ್ವ ಅಮೃತಸರ ಕ್ಷೇತ್ರದಿಂದ ಅವರು ಕಣಕ್ಕೆ ಇಳಿದಿದ್ದು, ಇಲ್ಲಿನ ಬಿಜೆಪಿ ಸಂಸದ, ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಪತ್ನಿ ಡಾ. ನವಜೋತ್ ಕೌರ್ ಅವರ ವಿರುದ್ಧ ಅವರು ಸ್ಪರ್ಧಿಸುತ್ತಿರುವುದು ವಿಶೇಷ.ರಿಕ್ಷಾವನ್ನು ವಿಶಿಷ್ಟ ರೀತಿಯಲ್ಲಿ ಅಲಂಕರಿಸಿ ಕ್ಷೇತ್ರದಾದ್ಯಂತ ಪ್ರಚಾರ ನಡೆಸುತ್ತಿರುವ ಸಿಂಗ್, ದಿನನಿತ್ಯದ ಕಾಯಕ ಮಾಡುವುದನ್ನೂ ಬಿಟ್ಟಿಲ್ಲ.`ಸ್ವಾತಂತ್ರ್ಯ ದೊರೆತು ಬಹಳಷ್ಟು ವರ್ಷಗಳೇ ಕಳೆದರೂ ನಮ್ಮಂತಹ ಬಡವರ ಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ದಿನಾ ದುಡಿಯದೇ ಹೋದರೆ ಕುಟುಂಬದವರು ಉಪವಾಸ ಇರಬೇಕಾಗುತ್ತದೆ. ಆದ್ದರಿಂದ ಈ ವ್ಯವಸ್ಥೆ ಬದಲಾವಣೆ ಮಾಡುವ ಉದ್ದೇಶದಿಂದ ಚುನಾವಣೆಗೆ ನಿಂತಿದ್ದೇನೆ.  ಒಂದು ವೇಳೆ ಆಯ್ಕೆಯಾದರೆ ಸೈಕಲ್‌ನಲ್ಲಿ ಓಡಾಡಿ ಆದ್ಯತೆ ಮೇರೆಗೆ ಜನರ ಸಮಸ್ಯೆಯನ್ನು ಆಲಿಸುತ್ತೇನೆ~ ಎಂದು ನಾಲ್ಕು ಮಕ್ಕಳ ತಂದೆಯಾಗಿರುವ ಮಹೀಂದ್ರ ಸಿಂಗ್ ಅವರು  ಹೇಳಿದ್ದಾರೆ.

 

ಪ್ರತಿಕ್ರಿಯಿಸಿ (+)