ಬುಧವಾರ, ಜೂನ್ 23, 2021
30 °C

ಸ್ಪರ್ಧೆಗೆ ಹರ್ಷ ಮೊಯಿಲಿ ಅನರ್ಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಮಂಗಳೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯನ್ನು ಆರಿಸುವುದಕ್ಕಾಗಿ ನಡೆಯಲಿ­ರುವ ಆಂತರಿಕ ಚುನಾವಣೆಯ ಪ್ರಮುಖ ಅಭ್ಯರ್ಥಿಗಳಲ್ಲಿ ಒಬ್ಬರಾಗಿದ್ದ ಕೇಂದ್ರ ಸಚಿವ ವೀರಪ್ಪ ಮೊಯಿಲಿ ಅವರ ಪುತ್ರ ಹರ್ಷ ಮೊಯಿಲಿ ಸ್ಪರ್ಧೆಗೆ ಪಕ್ಷದ ಕೇಂದ್ರ ಚುನಾವಣಾ ಸಮಿತಿ ತಡೆ ಒಡ್ಡಿದೆ.‘ಹರ್ಷ ಮೊಯಿಲಿ ಅವರು ನಾಮಪತ್ರದಲ್ಲಿ ಸಾಮಾಜಿಕ ಕಾರ್ಯಕರ್ತ ಎಂದು ಉಲ್ಲೇಖಿಸಿದ್ದರು. ಪಕ್ಷದ ಪೂರ್ಣಾವಧಿ ಕಾರ್ಯಕರ್ತರ ಹೊರತು ಉಳಿದವರು ಸ್ಪರ್ಧಿಸುವಂತಿಲ್ಲ ಎಂಬ ನಿಯಮ ರೂಪಿಸಲಾಗಿದೆ. ಈ ಲೋಪದ ಹಿನ್ನೆಲೆಯಲ್ಲಿ ಹರ್ಷ ಅವರ ನಾಮಪತ್ರವನ್ನು ಕೇಂದ್ರೀಯ ಸಮಿತಿ ತಿರಸ್ಕರಿಸಿದೆ’ ಎಂದು ಪಕ್ಷದ ಚುನಾವಣಾ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.ಒಟ್ಟು ಮೂವರು ನಾಮಪತ್ರ ಸಲ್ಲಿಸಿದ್ದರು. ಇದೀಗ ಕಣದಲ್ಲಿ ಇಬ್ಬರೇ  ಉಳಿದಂತಾಗಿದೆ. ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿಯುವುದಕ್ಕೆ ಅವಕಾಶ ಇಲ್ಲ. ಹೀಗಾಗಿ ಮಾರ್ಚ್‌ 9ರಂದು ಈ ಚುನಾವಣೆ ನಡೆಯುತ್ತದೆ ಎಂದು ಇನ್ನೊಬ್ಬ ಚುನಾವಣಾ ಅಧಿಕಾರಿ ಪ್ರಣೀಲ್‌ ನಾಯರ್‌ ಸ್ಪಷ್ಟಪಡಿಸಿದರು.ಮತದಾರರ ಪಟ್ಟಿಯನ್ನು ಬಹುತೇಕ ಅಂತಿಮಗೊಳಿಸಲಾಗಿದೆ. ಮತದಾರರ ಪಟ್ಟಿಯನ್ನು ಸೋಮವಾರ ಪಕ್ಷವು ಬಿಡುಗಡೆ ಮಾಡಲಿದೆ ಎಂದರು.ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ, ಹರ್ಷ ಮೊಯಿಲಿ ಮತ್ತು ಕಣಚೂರು ಮೋನು ಅವರು ನಾಮಪತ್ರ ಸಲ್ಲಿಸಿದ್ದರು. ಇದೀಗ ಪೂಜಾರಿ ಮತ್ತು ಮೋನು ಅವರಲ್ಲಿ ಒಬ್ಬರನ್ನು ಮತದಾರರು ಆಯ್ಕೆ ಮಾಡಬೇಕಿದೆ. ಪಕ್ಷದ ಜಿಲ್ಲಾ ಕಚೇರಿಯ ಸೂಚನಾ ಫಲಕದಲ್ಲೂ ಇದೀಗ ಇಬ್ಬರು ಅಭ್ಯರ್ಥಿಗಳ ಹೆಸರು ಮಾತ್ರ ಉಳಿದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.