ಶುಕ್ರವಾರ, ಜನವರಿ 24, 2020
20 °C

ಸ್ಪರ್ಧೆಯ ಬದುಕು ರೂಪಿಸಿ: ಹೆಗ್ಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಂದಾಪುರ: ಸ್ಪರ್ಧಾತ್ಮಕ ಯುಗದಲ್ಲಿ ವೇಗದ ಹೆಜ್ಜೆಯನ್ನು ಇಡುತ್ತಿರುವ ವಿದ್ಯಾರ್ಥಿಗಳು ಜೀವನದ ಪ್ರತಿ­ಯೊಂದು ಘಟ್ಟದಲ್ಲಿಯೂ ಸ್ಪರ್ಧೆಯ ಬದುಕ­ನ್ನು ರೂಪಿಸಿಕೊಳ್ಳಲೇ ಬೇಕಾದ ಅನಿವಾರ್ಯತೆ ಇದೆ. ಈ ರೀತಿಯ ಮನೋಭಾವವನ್ನು ರೂಢಿಸಿಕೊಳ್ಳದೆ ಹೋದರೆ ಅವಕಾಶಗಳು ಕೈತಪ್ಪುವ ಸಾಧ್ಯತೆಗಳು ಇದೆ ಎಂದು ಧರ್ಮಸ್ಥಳ­ದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.ಕುಂದಾಪುರದ ಭಂಡಾರ್‌ಕಾರ್ಸ್‌ ಕಲಾ ಮತ್ತು ವಿಜ್ಞಾನ ಕಾಲೇಜಿನ ಸುವರ್ಣ ಸಂಭ್ರಮಾಚರಣೆಯ ಅಂಗ­ವಾಗಿ ಮಾಧವ ಮಂಟಪದಲ್ಲಿ ಶನಿ­ವಾರ ನಡೆದ  ಸುವರ್ಣ ಸಂಭ್ರಮ ಸಭೆಯಲ್ಲಿ ಸ್ಮರಣ ಸಂಚಿಕೆ ‘ಹೊನ್ನ ಭಂಡಾರ’ ಅನಾವರಣ ಮಾಡಿ ಅವರು ಮಾತನಾಡಿದರು.ವಿದ್ಯಾರ್ಥಿ ಜೀವನವನ್ನು ಮುಗಿಸಿ ಶಿಕ್ಷಣ ಸಂಸ್ಥೆಯಿಂದ ಹೊರ ಬರುವಾಗ ಜ್ಞಾನ ದಾಹವನ್ನು ಇಂಗಿಸಿಕೊಂಡ ಸಂತೃಪ್ತಿಯ ಭಾವವವಿರಬೇಕು. ಶ್ರದ್ಧೆ­ಯ ಓದು, ವ್ಯಕ್ತಿಯ ವಿಕಸನಕ್ಕೆ ನಾಂದಿ­ಯಾಗುತ್ತದೆ. ಅಧ್ಯಯನ ವ್ಯಾಪ್ತಿ ವಿಶಾಲವಾದಾಗ ಭೌದ್ಧಿಕ ಮಟ್ಟವೂ ವಿಕಸನಗೊಂಡು ಬೆಳವಣಿಗೆಗೆ ಸಹ­ಕಾರಿ­ಯಾಗುತ್ತದೆ. ಆಧುನಿಕತೆ ಹಾಗೂ ವಿಜ್ಞಾನ ಯುಗದ ಬೆಳವಣಿಗೆ­ಯಿಂದಾ­ಗಿ ಶಿಕ್ಷಕರನ್ನೇ ಮೌಲ್ಯ­ಮಾಪನ ಮಾಡು­ವಷ್ಟು ವಿದ್ಯಾರ್ಥಿಗಳು ಪರಿ­ಪಕ್ವ­­ವಾಗಿದ್ದಾರೆ ಎಂದರು.ಕಲಿಯುವಿಕೆಗೆ ಕೊನೆ ಇಲ್ಲ, ಜ್ಞಾನ ದಾಹ ಉತ್ತಮ ಪ್ರಗತಿಗೆ ದಾರಿ­ಯಾಗುತ್ತದೆ ಎಂದು ಹೇಳಿದ ಅವರು ಪರಿಪೂರ್ಣವಾದ ವಿದ್ಯೆ ದೊರಕಿದಾಗ ಬದುಕಿಗೊಂದು ಶೋಭೆ ಬರುತ್ತದೆ ಎಂದರು.ಆಕಾಡೆಮಿ ಆಫ್ ಜನರಲ್ ಎಜು­ಕೇಶನ್ ಮಣಿಪಾಲದ ಅಧ್ಯಕ್ಷ ಡಾ.ಎಚ್.ಎಸ್.ಬಲ್ಲಾಳ್ ಅದ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.­ಚಂದ್ರಶೇಖರ್ ಶೆಟ್ಟಿ, ಪಂಜಾಬ್ ನ್ಯಾಷನಲ್ ಬ್ಯಾಂಕ್‌­ನ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಕೆ.ಆರ್.ಕಾಮತ್ ಮುಖ್ಯ ಅತಿಥಿ­ಗಳಾ­ಗಿದ್ದರು.ಕಾಲೇಜಿನ ಆಡಳಿತಾಧಿಕಾರಿ ಡಾ.­ಎಚ್‌.ಶಾಂತಾ­ರಾಮ್‌, ವಿಶ್ವಸ್ಥರಾದ ಬಿ.ಎಂ.ಸುಕುಮಾರ್ ಶೆಟ್ಟಿ, ದೇವದಾಸ ಕಾಮತ್, ಸೋಲೊಮನ್ ಸೋನ್ಸ್, ಶಾಂತಾರಾಮ ಪ್ರಭು, ರಾಜೇಂದ್ರ ತೋಳಾರ್, ಎಂ.ಪದ್ಮಾಕರ ನಾಯಕ್, ಸದಾನಂದ ಚಾತ್ರ ಹಾಗೂ ಶಿಕ್ಷಕ-–ರಕ್ಷಕ ಸಂಘದ ನೀಲಾವರ ಸುರೇಂದ್ರ ಅಡಿಗ, ಕಾರ್ಯದರ್ಶಿ ನರಸಿಂಹ, ಬೋಧಕರ ಪ್ರತಿನಿಧಿ ಕೋಟ ಶಾಂತಾ­ರಾಮ್ ಹಾಗೂ ಪಿಯು ಕಾಲೇಜಿನ ಪ್ರಾಂಶುಪಾಲ ಜಿ.ಎಂ.ಗೊಂಡಾ ಮತ್ತಿ­ತರರು ಇದ್ದರು.ಕಾಲೇಜು ವಿಶ್ವಸ್ಥ ಮಂಡಳಿ ಉಪಾ­ಧ್ಯಕ್ಷ ಡಾ.ಎಚ್‌.­ಶಾಂತಾ­ರಾಮ್ ಸ್ವಾಗತಿ­ಸಿದರು. ಸಸ್ಯ ಶಾಸ್ತ್ರ ವಿಭಾಗ ಮುಖ್ಯಸ್ಥ ವಿ.ಅರವಿಂದ ಹೆಬ್ಬಾರ್ ಸಂದೇಶ ವಾಚಿಸಿದರು, ವಿಶ್ರಾಂತ ಉಪ­ನ್ಯಾಸಕ ಡಾ.ಎಚ್‌.ವಿ ನರಸಿಂಹ­ಮೂರ್ತಿ ನಿರೂಪಿಸಿದರು, ಕಾಲೇಜಿನ ಪ್ರಾಚಾರ್ಯ ಡಾ.ಎನ್.ಪಿ. ನಾರಾ­ಯಣ ಶೆಟ್ಟಿ ವಂದಿಸಿದರು.

ಪ್ರತಿಕ್ರಿಯಿಸಿ (+)