ಸ್ಪರ್ಶಪರದೆ ಸೌಲಭ್ಯದ `ಇ ಟಚ್-ಪೆನ್'

7

ಸ್ಪರ್ಶಪರದೆ ಸೌಲಭ್ಯದ `ಇ ಟಚ್-ಪೆನ್'

Published:
Updated:

ಬೆಂಗಳೂರು: ಮೈಕ್ರೊಸಾಫ್ಟ್ ವಿಂಡೋಸ್-7 ನಿರ್ವಹಣಾ ವ್ಯವಸ್ಥೆಯ ಲ್ಯಾಪ್‌ಟಾಪ್, ನೋಟ್‌ಬುಕ್‌ಗಳನ್ನು `ಟಚ್‌ಸ್ಕ್ರೀನ್'(ಸ್ಪರ್ಶಪರದೆ) ದರ್ಜೆಗೇರಿಸುವ `ಇ ಟಚ್-ಪೆನ್' ಸಾಧನವನ್ನು ಬೆಂಗಳೂರಿನ `ಹೈಟೆಕ್ ಸಲ್ಯೂಷನ್ಸ್' ಕಂಪೆನಿ  ಅಭಿವೃದ್ಧಿಪಡಿಸಿದೆ.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ನೂತನ ಸಾಧನ ಪರಿಚಯಿಸಿದ ಕಂಪೆನಿ `ಸಿಇಒ' ಸಿಲ್ವಸ್ಟರ್ ಪಿ.ಮೂರ್ತಿ, ವಿಶ್ವದಾದ್ಯಂತ `ವಿಂಡೋಸ್-7' ಬಳಸುವ 65 ಕೋಟಿ ಮಂದಿ ವಿಂಡೋಸ್-8ಕ್ಕೆ ಬದಲಿಸಿಕೊಳ್ಳಲು ಕಾಯುತ್ತಿದ್ದಾರೆ. ಆರು ಕೋಟಿ ಮಂದಿ ಆಗಲೇ ವಿಂಡೋಸ್-8ಕ್ಕೆ ಬದಲಾಗಿದ್ದಾರೆ. ವಿಂಡೋಸ್-8ರಲ್ಲಿನ `ಸ್ಪರ್ಶಪರದೆ' ರೀತಿ ಸೌಲಭ್ಯವನ್ನೇ `ಇ ಟಚ್-ಪೆನ್' ನೀಡಲಿದೆ ಎಂದರು.ಹೆಚ್ಚು ಬರವಣಿಗೆ ವೃತ್ತಿಯವರಿಗೆ ನೆರವಾಗುವಂತಹ ಕೈಬರಹ ಗ್ರಹಿಕೆ ತಂತ್ರಾಂಶ, ವರ್ಣ ಚಿತ್ರರಚನೆ ಸೌಲಭ್ಯ `ಇ ಟಚ್-ಪೆನ್'ನಲ್ಲಿವೆ. ಬೆಲೆ ರೂ.3999. ಒಂದು ವರ್ಷದಲ್ಲಿ ಭಾರತದಲ್ಲಿ 50 ಸಾವಿರ ಸೇರಿದಂತೆ ಒಟ್ಟು 4 ಲಕ್ಷ ಇ ಟಚ್-ಪೆನ್ ಮಾರುವ ಗುರಿ ಇದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry