ಸ್ಪಷ್ಟವಾದ ಗುರಿ ಅಗತ್ಯ

7

ಸ್ಪಷ್ಟವಾದ ಗುರಿ ಅಗತ್ಯ

Published:
Updated:

ಬೆಂಗಳೂರು: `ಜೀವನದಲ್ಲಿ ಏನಾದರೂ ಸಾಧಿಸಲು ಪ್ರತಿ ವಿದ್ಯಾರ್ಥಿಗಳು ಅನುವಾಗಬೇಕು. ಸ್ಪಷ್ಟ ಗುರಿ ಮತ್ತು ದಕ್ಕುವ ಅವಕಾಶಗಳನ್ನು ಸೂಕ್ತವಾಗಿ ಬಳಸಿಕೊಂಡು ಸಾಧನೆಗೆ ಮುಂದಾಗಬೇಕು~ ಎಂದು ಬಿಬಿಎಂಪಿ ಆಯುಕ್ತ ಎಂ.ಕೆ.ಶಂಕರಲಿಂಗೇಗೌಡ ಕರೆ ನೀಡಿದರು.ನ್ಯಾಷನಲ್ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗವು ನಗರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಂತರ ನಡೆದ ವಿದ್ಯಾರ್ಥಿ ಮತ್ತು ಆಯುಕ್ತರ ನಡುವಿನ ಸಂವಾದ ಹೀಗಿದೆ...ಪ್ರಶ್ನೆ: ಪಾಲಿಕೆಯಲ್ಲಿ ಹಗರಣಗಳು ಬೆಳಕಿಗೆ ಬಂದಾಗ ಅದರ ಕಡತಗಳಿಗೆ ಬೆಂಕಿ ಬೀಳುವುದೇಕೆ? ಎಲ್ಲಾ ದಾಖಲೆಗಳನ್ನು ಕಂಪ್ಯೂಟರೀಕರಣ ಮಾಡಬಹುದಲ್ಲವೇ? ಈ ಪ್ರಶ್ನೆಗೆ ಕ್ಷಣಕಾಲ ತಬ್ಬಿಬ್ಬಾದ ಆಯುಕ್ತರು,  `ಭದ್ರತೆಯ ಹಿತದೃಷ್ಟಿಯಿಂದ ದಾಖಲೆಗಳು ಕಂಪ್ಯೂಟರ್‌ನಲ್ಲಿರುವುದು ಅಷ್ಟು ಸೂಕ್ತವಲ್ಲ. ಅದರಲ್ಲಿಯೂ ಕೆಲವೊಂದು ತಾಂತ್ರಿಕ ನ್ಯೂನ್ಯತೆಗಳಿವೆ~ ಎಂದು ಉತ್ತರ ನೀಡಿದರು.ಪ್ರಶ್ನೆ: ಪಾಲಿಕೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುವ ಪೌರ ಕಾರ್ಮಿಕರನ್ನು ಕಾಯಂ ಮಾಡಲು ಸಾಧ್ಯವಿಲ್ಲವೇ?ಪಾಲಿಕೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರನ್ನು ಕಾಯಂ ಮಾಡಲು ಹಲವು ತೊಡಕುಗಳಿವೆ. ಈ ಸಮಸ್ಯೆಯನ್ನು ಈ ಹಿಂದೆ ಕಾರ್ಯನಿರ್ವಹಿಸಿದ್ದ ಆಯುಕ್ತರು ಸಹ ಎದುರಿಸಿದ್ದಾರೆ. ತಿಂಗಳೊಳಗೆ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದರು.ನಗರದ ಸಮಸ್ಯೆಗೆ ಪಾಲಿಕೆ ಕಂಡುಕೊಂಡ ಪರಿಹಾರವೇನು?

`1942ರ ಸಂದರ್ಭದಲ್ಲಿ ನಗರದ ಜನಸಂಖ್ಯೆ ಕೇವಲ ಎರಡು ಲಕ್ಷವಿತ್ತು. ಪ್ರಸ್ತುತ 85 ಲಕ್ಷ ಜನರಿರುವ ನಗರದಲ್ಲಿ ನೀರು, ವಿದ್ಯುತ್ ಮತ್ತು ನೈರ್ಮಲ್ಯದ ಸಮಸ್ಯೆ ತೀವ್ರವಾಗಿದೆ. ದಿನವೊಂದಕ್ಕೆ 1.5 ದಶಲಕ್ಷ ಲೀಟರ್ ನೀರು ಅಗತ್ಯವಾಗಿ ಬೇಕಿದೆ. ಈ ಎಲ್ಲಾ ಸಮಸ್ಯೆಗಳಿಗೆ ಹಂತ ಹಂತವಾಗಿ ಪರಿಹಾರ ಕಂಡುಕೊಳ್ಳಬೇಕು~ ಎಂದರು.ಪ್ರಶ್ನೆ: ಮಳಿಗೆಗಳ ತೆರವಿನಿಂದ ಗಾಂಧಿ ಬಜಾರ್‌ನ ಅಂದಕ್ಕೆ ಕುಂದಾಗಲಿಲ್ಲವೇ?

`ರಸ್ತೆಯ ಅಜುಬಾಜಿನಲ್ಲಿ ಅಂಗಡಿಗಳನ್ನು ತೆರೆದರೆ ಅಂದ ಹೆಚ್ಚುವುದೇ? ಖಂಡಿತಾ ಇಲ್ಲ. ಅಂಗಡಿ ಮುಂಗಟ್ಟುಗಳನ್ನು ತೆರೆಯುವ ಸಲುವಾಗಿ ಪಾದಚಾರಿ ಮಾರ್ಗಗಳನ್ನು ಬಳಸಿಕೊಳ್ಳಬಾರದು. ಅನಧಿಕೃತ ವಾಣಿಜ್ಯ ಮಳಿಗೆಗಳನ್ನು ತೆರವುಗೊಳಿಸುವ ಮೂಲಕ ಗಾಂಧಿ ಬಜಾರ್‌ನಲ್ಲಿ ಸಂಚರಿಸುವ ಪಾದಚಾರಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ಸಮರ್ಥಿಸಿಕೊಂಡರು.ಪ್ರಶ್ನೆ: ತ್ಯಾಜ್ಯ ನಿರ್ವಹಣೆಯ ಬಗ್ಗೆ

`ಪ್ರತಿ ದಿನ ಐದು ಸಾವಿರ ಮೆಟ್ರಿಕ್ ಟನ್‌ಗಳಷ್ಟು ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಇದರಿಂದ ವಿದ್ಯುತ್ ತಯಾರಿಕೆ ಮತ್ತು ಇತರೆ ಪರ್ಯಾಯ ಮಾರ್ಗವನ್ನು ಅನುಸರಿಸುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಚಿಂತನೆ ನಡೆಸಬೇಕು~ ಎಂದರು.ಎನ್‌ಇಎಸ್ ಸಂಸ್ಥೆಗಳ ಕಾರ್ಯದರ್ಶಿ ಪ್ರೊ.ಎಸ್.ಎನ್.ನಾಗರಾಜ ರೆಡ್ಡಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಎಸ್.ಜಯಸಿಂಹ ಇತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry