ಗುರುವಾರ , ಅಕ್ಟೋಬರ್ 24, 2019
21 °C

ಸ್ಪಾಟ್‌ಫಿಕ್ಸಿಂಗ್: ಐಸಿಸಿಗೆ ಆಸಿಫ್ ಮೇಲ್ಮನವಿ

Published:
Updated:

ಕರಾಚಿ (ಪಿಟಿಐ): ಪಾಕಿಸ್ತಾನದ ವೇಗದ ಬೌಲರ್ ಮೊಹಮ್ಮದ್ ಆಸಿಫ್ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಹೇರಿರುವ ಐದು ವರ್ಷಗಳ ನಿಷೇಧ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದಾರೆ. ಸ್ವಿಟ್ಜರ್‌ಲೆಂಡ್‌ನಲ್ಲಿರುವ ಕ್ರೀಡಾ ವ್ಯಾಜ್ಯ ನ್ಯಾಯಮಂಡಳಿಯ ಮೂಲಕ ಮೇಲ್ಮನವಿ ಸಲ್ಲಿಸಿದ್ದಾರೆ.ಐಸಿಸಿ ಭ್ರಷ್ಟಾಚಾರ ತಡೆ ವಿಭಾಗ ಆಸಿಫ್ ಅಲ್ಲದೆ ಪಾಕಿಸ್ತಾನದ ಇತರ ಇಬ್ಬರು ಆಟಗಾರರಾದ ಸಲ್ಮಾನ್ ಬಟ್ ಮತ್ತು ಮೊಹಮ್ಮದ್ ಅಮೀರ್ ಮೇಲೆ ಕಳೆದ ಫೆಬ್ರುವರಿಯಲ್ಲಿ ನಿಷೇಧ ಹೇರಿತ್ತು. 2010 ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ವೇಳೆ `ಸ್ಪಾಟ್ ಫಿಕ್ಸಿಂಗ್~ ನಡೆಸಿದ್ದಕ್ಕೆ ಈ ಕ್ರಮ ಕೈಗೊಂಡಿತ್ತು.`ಐಸಿಸಿಯ ನ್ಯಾಯಮಂಡಳಿ ವಿಚಾರಣೆಯ ವೇಳೆ ಕೆಲವು ನಿಯಮಗಳನ್ನು ಉಲ್ಲಂಘಿಸಿದೆ. ಅದೇ ರೀತಿ ಆಸಿಫ್ ಅವರ ಮೂಲಭೂತ ಹಕ್ಕುಗಳನ್ನು ಅತಿಕ್ರಮಿಸಿತ್ತು~ ಎಂದು ಮೇಲ್ಮವಿಯಲ್ಲಿ ತಿಳಿಸಲಾಗಿದೆ. ಆಸಿಫ್ ಅವರಿಗೆ ನೆರವು ನೀಡುತ್ತಿರುವ ಕಾನೂನು ತಂಡದ ವಕ್ತಾರರು ಇದನ್ನು ಬಹಿರಂಗಪಡಿಸಿದ್ದಾರೆ. `ಈ ಕಾರಣಗಳಿಂದ ಐಸಿಸಿಯ ನಿಷೇಧ ಶಿಕ್ಷೆ ನ್ಯಾಯಸಮ್ಮತವಾದುದಲ್ಲ~ ಎಂದು ಹೇಳಲಾಗಿದೆ. ಬಟ್ ಮತ್ತು ಅಮೀರ್ ಈಗಾಗಲೇ ಮೇಲ್ಮನವಿ ಸಲ್ಲಿಸಿದ್ದರು.ಈ ಮೂವರು ಆಟಗಾರರು ಪ್ರಸಕ್ತ ಲಂಡನ್ ಜೈಲಿನಲ್ಲಿದ್ದಾರೆ. `ಸ್ಪಾಟ್ ಫಿಕ್ಸಿಂಗ್~ ಪ್ರಕರಣದಲ್ಲಿ ಲಂಡನ್‌ನ ನ್ಯಾಯಾಲಯ ಇವರಿಗೆ ಶಿಕ್ಷೆ ವಿಧಿಸಿತ್ತು. ಆಸಿಫ್ ಅವರನ್ನು ಲಂಡನ್‌ನ ಕ್ಯಾಂಟರ್‌ಬರಿ ಜೈಲಿನಲ್ಲಿರಿಸಲಾಗಿದೆ.ಅಮೀರ್ ಮುಂದಿನ ತಿಂಗಳು ಜೈಲಿನಿಂದ ಹೊರಬರುವ ಸಾಧ್ಯತೆಯಿದೆ. ಲಂಡನ್‌ನ ಕ್ರೌನ್ ನ್ಯಾಯಾಲಯ ಅಮೀರ್‌ಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ಇಂಗ್ಲೆಂಡ್‌ನ ನಿಯಮದಂತೆ ಉತ್ತಮ ನಡತೆ ತೋರಿದ ಅಪರಾಧಿಯ ಶಿಕ್ಷೆಯ ಅರ್ಧದಷ್ಟು ಅವಧಿಯನ್ನು ಕಡಿತಗೊಳಿಸಲಾಗುವುದು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)