ಸ್ಪಾಟ್ ಫಿಕ್ಸಿಂಗ್: ಪಾಕ್ ಆಟಗಾರರ ವಿರುದ್ಧ ಸಂಚು ರೂಪಿಸಿದ ಆರೋಪ

7

ಸ್ಪಾಟ್ ಫಿಕ್ಸಿಂಗ್: ಪಾಕ್ ಆಟಗಾರರ ವಿರುದ್ಧ ಸಂಚು ರೂಪಿಸಿದ ಆರೋಪ

Published:
Updated:

ಲಂಡನ್ (ಪಿಟಿಐ):  ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ವಿಚಾರಣಾ ಸಮಿತಿಯಿಂದ ವಿಚಾರಣೆಗೆ ಒಳಗಾಗಿರುವ ಪಾಕಿಸ್ತಾನದ ಕ್ರಿಕೆಟಿಗರಾದ ಸಲ್ಮಾನ್ ಬಟ್, ಮೊಹಮ್ಮದ್ ಆಸೀಫ್ ಹಾಗೂ ಮೊಹಮ್ಮದ್ ಅಮೀರ್ ಮೇಲೆ ಮತ್ತೊಂದು ಭರಸಿಡಿಲು ಬಂದೆರಗಿದೆ.ಲಂಡನ್ ಪೊಲೀಸರು ಸ್ಪಾಟ್ ಫಿಕ್ಸಿಂಗ್ ತನಿಖೆಯನ್ನು ಪೂರ್ಣಗೊಳಿ ಸಿದ್ದು ಈ ಮೂವರೂ ಆಟಗಾರರ ವಿರುದ್ಧ ಸಂಚು ರೂಪಿಸಿದ ಆರೋಪ ಮಾಡಿ ದೂರು ಪಟ್ಟಿಯನ್ನು ನ್ಯಾಯಾಲಯದಲ್ಲಿ ದಾಖಲಿಸಿದ್ದಾರೆ. ಈ ಮೊದಲ ವಿಚಾರಣೆಯು ಮಾರ್ಚ್ 17ರಂದು ನಡೆಯಲಿದ್ದು, ಪಾಕ್ ಕ್ರಿಕೆಟಿಗರು ಖುದ್ದಾಗಿ ನ್ಯಾಯಾಲಯದ ಮುಂದೆ ಹಾಜರಾಗಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry