ಸ್ಪೀಕರ್‌ ಸ್ಥಾನಕ್ಕೆ ಬಿಜೆಪಿ ಸ್ಪರ್ಧೆ

7

ಸ್ಪೀಕರ್‌ ಸ್ಥಾನಕ್ಕೆ ಬಿಜೆಪಿ ಸ್ಪರ್ಧೆ

Published:
Updated:

ನವದೆಹಲಿ (ಪಿಟಿಐ): ದೆಹಲಿ ವಿಧಾನ­ಸಭಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಶಾಸಕ ಜಗದೀಶ್‌ ಮುಖಿ ನಾಮಪತ್ರ ಸಲ್ಲಿಸಿ­ದ್ದಾರೆ. ಇದರೊಂದಿಗೆ ವಿಧಾನ

ಸಭಾಧ್ಯಕ್ಷ­ರ ಆಯ್ಕೆ ಕುತೂಹಲ  ಕೆರಳಿಸಿದೆ.

ಆಡಳಿತಾರೂಢ ಆಮ್‌ ಆದ್ಮಿ ಪಕ್ಷ (ಎಎಪಿ) ತನ್ನ ಶಾಸಕ ಎಮ್‌. ಎಸ್‌. ಧೀರ್‌ ಅವರನ್ನು ಸಭಾಧ್ಯಕ್ಷ ಸ್ಥಾನದ ಅಭ್ಯರ್ಥಿ ಎಂದು ಘೋಷಿಸಿದೆ.

ದೆಹಲಿ ಶಾಸನ ಸಭೆಯ ಅತ್ಯಂತ ಹಿರಿಯ ಶಾಸಕರಾಗಿರುವ ಮುಖಿ ಹಂಗಾಮಿ ಸ್ಪೀಕರ್‌ ಆಗಲು ನಿರಾಕರಿಸಿ­ದ್ದರು. ನಂತರದ ಸ್ಥಾನದಲ್ಲಿರುವ ಜೆಡಿಯು ಶಾಸಕ ಶೋಯಿಬ್‌ ಇಕ್ಬಾಲ್‌ ಕೂಡ ಈ ಸ್ಥಾನ ಒಲ್ಲೆನೆಂದರು. ಹಾಗಾಗಿ ಕಾಂಗ್ರೆಸ್‌ ಶಾಸಕ ಮತೀನ್‌ ಅಹ್ಮದ್‌ ಅವರನ್ನು ಹಂಗಾಮಿ ಸಭಾಧ್ಯಕ್ಷರಾಗಿ ನೇಮಿಸಲಾಯಿತು. ಶುಕ್ರವಾರ ಸಭಾಧ್ಯಕ್ಷರ ಆಯ್ಕೆ ನಡೆಯಲಿದೆ. ಒಟ್ಟು 70 ಸದಸ್ಯರ ಸದನದಲ್ಲಿ ಎಎಪಿ 28 ಶಾಸಕರನ್ನು ಹೊಂದಿದೆ. ಈ ಪಕ್ಷದ ಅಭ್ಯರ್ಥಿ ಆಯ್ಕೆಗೆ ಎಂಟು ಮತಗಳ ಕೊರತೆ ಇದೆ. ಆದರೆ ಎಎಪಿಗೆ ಕಾಂಗ್ರೆಸ್‌ನ ಎಂಟು ಶಾಸಕರ ಬೆಂಬಲ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry