ಸ್ಪೀಕರ್ ನಡವಳಿಕೆ: ಕೇಂದ್ರಕ್ಕೆ ವರದಿ- ಭಾರದ್ವಾಜ್

7

ಸ್ಪೀಕರ್ ನಡವಳಿಕೆ: ಕೇಂದ್ರಕ್ಕೆ ವರದಿ- ಭಾರದ್ವಾಜ್

Published:
Updated:
ಸ್ಪೀಕರ್ ನಡವಳಿಕೆ: ಕೇಂದ್ರಕ್ಕೆ ವರದಿ- ಭಾರದ್ವಾಜ್

ಶ್ರೀರಂಗಪಟ್ಟಣ: ವಿಧಾನ ಸಭೆ ಸ್ಪೀಕರ್ ಬೋಪಯ್ಯ ಅವರ ಸದನದಲ್ಲಿನ ನಡವಳಿಕೆ ಕುರಿತು ಕೇಂದ್ರಕ್ಕೆ ವರದಿ ಸಲ್ಲಿಸಲಾಗುವುದು ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ತಿಳಿಸಿದರು.  ಸೋಮವಾರ ಪಟ್ಟಣದ ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆಗೆ ಕುಟುಂಬ ಸಹಿತ ಭೇಟಿ ನೀಡಿದ್ದ ಅವರು ಸ್ಮಾರಕ ಹಾಗೂ ವಸ್ತುಸಂಗ್ರಹಾಲಯ ವೀಕ್ಷಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದರು.~ಸದನಲ್ಲಿ ಸ್ಪೀಕರ್ ಕೈಗೊಂಡ ತೀರ್ಮಾನ ಕುರಿತು ಸುಪ್ರೀಂ ಕೋರ್ಟ್ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ.ಬೋಪಯ್ಯ ಅವರು ಸ್ಪೀಕರ್ ಸ್ಥಾನದಲ್ಲಿ ಮುಂದುವರೆಯಬೇಕೆ? ಬೇಡವೆ? ಎಂಬ ಬಗ್ಗೆ ಸರ್ಕಾರವೇ ತೀರ್ಮಾನ ತೆಗೆದುಕೊಳ್ಳಬೇಕು~ ಎಂದರು. ~ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ವಿಧಾನ ಮಂಡಲ ಅಧಿವೇಶನ ಬಹಿಷ್ಕರಿಸಿರುವುದು ಆ ಪಕ್ಷಗಳಿಗೆ ಸಂಬಂಧಿಸಿದ ವಿಷಯ. ಆ ಬಗ್ಗೆ ಏನನ್ನೂ ಹೇಳುವುದಿಲ್ಲ. ಸದನದಲ್ಲಿ ಪಾಲ್ಗೊಳ್ಳುವ, ಇಲ್ಲವೆ ಬಹಿಷ್ಕಾರ ಮುಂದುವರೆಸುವ ಕುರಿತು ಆ ಪಕ್ಷಗಳ ನಾಯಕರೇ ನಿರ್ಧರಿಸಬೇಕು~ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry