ಸ್ಪೆಲ್ಲಿಂಗ್ ಬೀ ಕಿರೀಟ ಮತ್ತೊಮ್ಮೆ ಭಾರತದ ಮುಡಿಗೆ

ಶನಿವಾರ, ಜೂಲೈ 20, 2019
24 °C

ಸ್ಪೆಲ್ಲಿಂಗ್ ಬೀ ಕಿರೀಟ ಮತ್ತೊಮ್ಮೆ ಭಾರತದ ಮುಡಿಗೆ

Published:
Updated:

ವಾಷಿಂಗ್ಟನ್ (ಐಎಎನ್‌ಎಸ್): ಇಲ್ಲಿ ನಡೆದ ಸ್ಕ್ರಿಪ್ಸ್ ರಾಷ್ಟ್ರೀಯ `ಸ್ಪೆಲ್ಲಿಂಗ್ ಬೀ~ ಸ್ಪರ್ಧೆಯಲ್ಲಿ ಭಾರತೀಯ ಮೂಲದ ಸುಕನ್ಯ ರಾಯ್ ಎಂಬ ಬಾಲಕಿ ಗೆಲುವು ಸಾಧಿಸಿದ್ದಾಳೆ. ಈ ಮೂಲಕ ಸತತ ನಾಲ್ಕನೇ ವರ್ಷ ಈ ಗೌರವ ಭಾರತೀಯ ಸಮುದಾಯದವರ ಪಾಲಾಗಿದೆ.ಪಶ್ಚಿಮ ಬಂಗಾಳಕ್ಕೆ ಸೇರಿದ 14 ವರ್ಷದ ಸುಕನ್ಯಾ, ಪೆನ್ಸಿಲ್ವೇನಿಯಾದ ಅಬಿಂಗ್ಟನ್ ಹೈಟ್ಸ್ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಾಳೆ. ಸಿಮೊಟ್ರೀಷಿಯಸ್ ಎಂಬ (ಗ್ರೀಕ್‌ನಲ್ಲಿ ನೀಳ ಕೂದಲು ಹೊಂದಿದವರು ಎಂಬರ್ಥ) ಪದವನ್ನು ಸರಾಗವಾಗಿ ಉಚ್ಛರಿಸುವ ಮೂಲಕ ಈಕೆ ಜಾಣ್ಮೆ ಮೆರೆದಿದ್ದಾಳೆ. ಇದೇ ಸ್ಪರ್ಧೆಯಲ್ಲಿ 2009ರಲ್ಲಿ 12 ಹಾಗೂ 2010ರಲ್ಲಿ 20ನೇ ಸ್ಥಾನ ಈಕೆಗೆ ಲಭಿಸಿತ್ತು.ಕಳೆದ 13 ವರ್ಷಗಳಲ್ಲಿ 9 ಮಂದಿ ಅನಿವಾಸಿ ಭಾರತೀಯ ಮಕ್ಕಳು ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಬಾರಿ ಅಂತಿಮ ಸ್ಪರ್ಧಾ ಕಣದಲ್ಲಿದ್ದ 13 ಮಂದಿಯಲ್ಲಿ 6 ಮಂದಿ ಭಾರತ ಮೂಲದವರಾಗಿದ್ದರು. ಪ್ರಶಸ್ತಿಯು 30 ಸಾವಿರ ಡಾಲರ್ ನಗದು, ಟ್ರೋಫಿ, 2500 ಡಾಲರ್ ಉಳಿತಾಯ ನಿಧಿ, ಗ್ರಂಥ ಭಂಡಾರ, 5 ಸಾವಿರ ಡಾಲರ್ ವಿದ್ಯಾರ್ಥಿ ವೇತನ ಹಾಗೂ 2600 ಡಾಲರ್ ಮೌಲ್ಯದ ಇತರ ಪ್ರಶಸ್ತಿಗಳನ್ನು ಒಳಗೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry