ಸ್ಪೇಸ್ ಅಕಾಡೆಮಿಯಲ್ಲಿ ಬೆಂಗಳೂರಿನ ಶಿಕ್ಷಕಿ

ಶನಿವಾರ, ಜೂಲೈ 20, 2019
27 °C

ಸ್ಪೇಸ್ ಅಕಾಡೆಮಿಯಲ್ಲಿ ಬೆಂಗಳೂರಿನ ಶಿಕ್ಷಕಿ

Published:
Updated:

ಅಮೆರಿಕದ ಅಲ್ಬಾಮಾ ಹಂಟ್ಸವಿಲ್ಲೆನಲ್ಲಿರುವ ಯುಎಸ್ ಸ್ಪೇಸ್ ಮತ್ತು ರಾಕೆಟ್ ಕೇಂದ್ರದಲ್ಲಿ ಜೂನ್ 14ರಿಂದ 28ರವರೆಗೆ ನಡೆದ `ಹನಿವೆಲ್ ಎಜುಕೇಟರ್ಸ್ ಸ್ಪೇಸ್ ಅಕಾಡೆಮಿ' ತರಬೇತಿ ಕಾರ್ಯಾಗಾರದಲ್ಲಿ ನಾಲ್ವರು ಭಾರತೀಯರ ಪೈಕಿ ಬೆಂಗಳೂರಿನ ವೀಣಾ ನಾಯ್ಕ ಕೂಡಾ ಸೇರಿದ್ದಾರೆ.ಯುಎಸ್‌ಆರ್‌ಸಿ ಮತ್ತು ಹನಿವೆಲ್ ಹೋಮ್‌ಟೌನ್ ಸಲ್ಯೂಶನ್, ಎಚ್‌ಇಎಸ್‌ಎ ಸಹಯೋಗದಲ್ಲಿ ನಡೆದ ಸ್ಕಾಲರ್‌ಶಿಪ್ ಕಾರ್ಯಾಗಾರ ಇದಾಗಿದ್ದು, ಮಾಧ್ಯಮಿಕ ಶಾಲಾ ಶಿಕ್ಷಕರು ಈ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಖಗೋಳ ವಿಜ್ಞಾನ ಮತ್ತು ವೃತ್ತಿಪರವಾಗಿ ಪ್ರಗತಿ ಹೊಂದುವ ಕುರಿತು ತರಬೇತಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಗಾರದಲ್ಲಿ ಮುಖ್ಯವಾಗಿ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (ಎಸ್‌ಟಿಇಎಂ) ವಿಷಯಗಳನ್ನು ಕಲಿಸುವ ಮತ್ತು ಹೊಸ ಪದ್ಧತಿಯ ಪಾಠ ಕ್ರಮ ಅಳವಡಿಸಿಕೊಳ್ಳುವ ಕುರಿತು ತರಬೇತಿ ನೀಡಲಾಯಿತು.27 ರಾಷ್ಟ್ರಗಳಿಂದ 210 ಮಾಧ್ಯಮಿಕ ಶಾಲಾ ಶಿಕ್ಷಕರು ಕಾರ್ಯಾಗಾರಕ್ಕೆ ಆಯ್ಕೆಯಾಗಿದ್ದರು. ಇವರಲ್ಲಿ  ಪುಣೆಯ ರಶ್ಮಿ ಗುಪ್ತಾ, ಮೋನಿಕಾ ಮಿಶ್ರಾ ಮತ್ತು ಸವಿತಾ ಶರ್ಮಾ ಹಾಗೂ ಬೆಂಗಳೂರಿನ ವೀಣಾ ನಾಯ್ಕ ಕೂಡ ಇದ್ದರು.ಕಾರ್ಯಾಗಾರದಲ್ಲಿ  ಖಗೋಳ ವಿಜ್ಞಾನ ಪಾಠ ಮಾಡುವ ಪದ್ಧತಿ, ವಿದ್ಯಾರ್ಥಿಗಳಲ್ಲಿರುವ ವಿಜ್ಞಾನ ಮತ್ತು ಪ್ರಯೋಗಾತ್ಮಕ ಆಸಕ್ತಿ ಗುರುತಿಸುವುದರ ಬಗ್ಗೆ ತರಬೇತಿ ನೀಡಲಾಯಿತು. ನಟನಾ ಕೌಶಲ್ಯತೆ, ಬಾಹ್ಯಾಕಾಶ ವಿಜ್ಞಾನ ಕುರಿತ ಕಥಾ ಸಾರಾಂಶಗಳಿಂದ ಪಾಠ, ನೀರು ಮತ್ತು ಭೂಮಿಯ ಮಹತ್ವ ಕುರಿತು ಅರಿವು, ವಿಮಾನ ಚಲನಶಾಸ್ತ್ರ ಕುರಿತು ಪರಸ್ಪರ ಚರ್ಚಾಕಾರ್ಯಕ್ರಮಗಳ ಮೂಲಕ ಪಾಠ ಮಾಡುವ ಬಗ್ಗೆ ತಿಳಿಸುವುದು ಕಾರ್ಯಾಗಾರದ ಮುಖ್ಯ ಉದ್ದೇಶವಾಗಿತ್ತು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry