ಮಂಗಳವಾರ, ಏಪ್ರಿಲ್ 13, 2021
30 °C

ಸ್ಪೋರ್ಟಿಂಗ್ ಲಿಸ್ಬನ್ ಜೊತೆ ಸುನಿಲ್ ಚೆಟ್ರಿ ಒಪ್ಪಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್/ ಪಿಟಿಐ): ಭಾರತ ಫುಟ್‌ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಅವರು `ಸ್ಪೋರ್ಟಿಂಗ್ ಲಿಸ್ಬನ್ ಫುಟ್‌ಬಾಲ್ ಕ್ಲಬ್~ ಎಂದೇ ಜನಪ್ರಿಯವಾಗಿರುವ ಪೋರ್ಚುಗಲ್‌ನ `ಸ್ಪೋರ್ಟಿಂಗ್ ಕ್ಲಬ್ ಡಿ ಪೋರ್ಚುಗಲ್~ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಚೆಟ್ರಿ ಒಂದು ವರ್ಷದ ಅವಧಿಗೆ ಕ್ಲಬ್‌ನ `ಬಿ~ ತಂಡದಲ್ಲಿ ಆಡುವ ಅವಕಾಶ ಗಿಟ್ಟಿಸಿದ್ದಾರೆ.`ಭಾರತ ತಂಡದ ನಾಯಕ ಚೆಟ್ರಿ ನಮ್ಮ ಕ್ಲಬ್‌ನ `ಬಿ~ (ರಿಸರ್ವ್) ತಂಡವನ್ನು ಸೇರಿಕೊಳ್ಳುವರು~ ಎಂದು ಪೋರ್ಚುಗಲ್‌ನ ಈ ಪ್ರಮುಖ ಕ್ಲಬ್ ವೆಬ್‌ಸೈಟ್‌ನಲ್ಲಿ ತಿಳಿಸಿದೆ.ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಲೂಯಿಸ್ ಫಿಗೊ ಅವರಂತಹ ಖ್ಯಾತ ಆಟಗಾರರಿದ್ದಂತಹ ಕ್ಲಬ್‌ಗೆ ಆಡುವ ಸುವರ್ಣಾವಕಾಶ ಚೆಟ್ರಿಗೆ ಒಲಿದಿದೆ. `ಬಿ~ ತಂಡದಲ್ಲಿ ನೀಡುವ ಪ್ರದರ್ಶನದ ಆಧಾರದಲ್ಲಿ ಅವರಿಗೆ ಪ್ರಮುಖ ತಂಡದಲ್ಲಿ ಸ್ಥಾನ ನೀಡಬೇಕೇ ಎಂಬುದನ್ನು ಕ್ಲಬ್ ನಿರ್ಧರಿಸಲಿದೆ.`ಫಿಫಾ ರ‌್ಯಾಂಕಿಂಗ್‌ನಲ್ಲಿ 163ನೇ ಸ್ಥಾನದಲ್ಲಿರುವ ದೇಶದ (ಭಾರತ) ಆಟಗಾರನಿಗೆ ರ‌್ಯಾಂಕಿಂಗ್‌ನಲ್ಲಿ ಐದನೇ ಸ್ಥಾನದಲ್ಲಿರುವ (ಪೋರ್ಚುಗಲ್) ದೇಶದಲ್ಲಿ ಆಡುವ ಅವಕಾಶ ಲಭಿಸಿದೆ. ನನ್ನ ಜೀವನದಲ್ಲಿ ಎಂದೆಂದಿಗೂ ಮರೆಯಲಾಗದ ಘಟನೆ ಇದು~ ಎಂದು ಚೆಟ್ರಿ ನುಡಿದಿದ್ದಾರೆ.  `ಅಲ್ಲಿ ಏನು ಸಾಧನೆ ಮಾಡುತ್ತೇನೆ ಎಂಬುದು ನನಗೆ ತಿಳಿದಿಲ್ಲ. ಆದರೂ ನನ್ನಿಂದ ಸಾಧ್ಯವಾದಷ್ಟು ಕಠಿಣ ಪ್ರಯತ್ನ ನಡೆಸುವೆನು~ ಎಂದಿದ್ದಾರೆ.ಕ್ಲಬ್ ಜೊತೆಗಿನ ಒಪ್ಪಂದದ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಆದರೂ ಈ ಋತುವಿನಿಂದಲೇ ಅವರು ಲಿಸ್ಬನ್ ಕ್ಲಬ್‌ಗೆ ಆಡುವುದು ಖಚಿತವಾಗಿದೆ. ಒಂದೆರಡು ವಾರಗಳಲ್ಲಿ ಅವರು ಪೋರ್ಚುಗಲ್‌ಗೆ ಪಯಣಿಸುವರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.