ಸ್ಫೂರ್ತಿ, ಶ್ರೇಯಲ್ ಚಾಂಪಿಯನ್

6
ರಾಜ್ಯ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್

ಸ್ಫೂರ್ತಿ, ಶ್ರೇಯಲ್ ಚಾಂಪಿಯನ್

Published:
Updated:

ಬೆಂಗಳೂರು: ಸ್ಫೂರ್ತಿ ಎಂ.ವಿ. ಮತ್ತು ಶ್ರೇಯಲ್ ಟಿ ಅವರು ಸಿವಿಎಲ್ ಶಾಸ್ತ್ರಿ ಸ್ಮಾರಕ ರಾಜ್ಯ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಜೂನಿಯರ್ ಬಾಲಕಿಯರ ಮತ್ತು ಬಾಲಕರ ವಿಭಾಗದಲ್ಲಿ ಪ್ರಶಸ್ತಿ ಎತ್ತಿ ಹಿಡಿದರು.ಇಂಡಿಯನ್ ಜಿಮ್ಖಾನಾದಲ್ಲಿ ಶನಿವಾರ ನಡೆದ ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಸ್ಪೂರ್ತಿ 11-7, 12-10, 11-5, 11-8ರಲ್ಲಿ ರಕ್ಷಾ ಆರ್. ಅವರನ್ನು ಮಣಿಸಿ ಚಾಂಪಿಯನ್ ಆದರು.ಸೆಮಿಫೈನಲ್ ಪಂದ್ಯಗಳಲ್ಲಿ ರಕ್ಷಾ 11-5, 11-7, 8-11, 11-7, 11-5ರಲ್ಲಿ ಮೈತ್ರೇಯಿ ಬೇಲೂರ ಮೇಲೂ, ಸ್ಫೂರ್ತಿ 11-5, 11-7, 11-9, 11-7ರಲ್ಲಿ ಮಾಧುರ್ಯ ಎಂ. ವಿರುದ್ಧವೂ ಜಯ ಸಾಧಿಸಿ ಪ್ರಶಸ್ತಿ ಘಟ್ಟ ಪ್ರವೇಶಿಸಿದ್ದರು.ಬಾಲಕರ ವಿಭಾಗದ ಫೈನಲ್‌ನಲ್ಲಿ ಶ್ರೇಯಾಲ್ 7-11, 12-10, 11-7, 11-9, 11-7ರಲ್ಲಿ ಸುನಂದ್ ವಾಸನ್ ಅವರನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡರು. ನಾಲ್ಕರ ಘಟ್ಟದ ಪಂದ್ಯಗಳಲ್ಲಿ ಸುನಂದ್ 11-4, 11-8, 12-14, 11-6, 11-8ರಲ್ಲಿ ಶ್ರೇಯಸ್ ಕುಲಕರ್ಣಿ ಮೇಲೂ, ಶ್ರೇಯಲ್ 11-8, 11-9, 11-1, 13-11ರಲ್ಲಿ ವಿ.ಪಿ. ಚರಣ್ ವಿರುದ್ಧವೂ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry