ಸ್ಫೋಟಕ ಪತ್ತೆಗೆ ವಿಮಾನನಿಲ್ದಾಣಗಳಲ್ಲಿ ಇಲಿ ದಳ!

7

ಸ್ಫೋಟಕ ಪತ್ತೆಗೆ ವಿಮಾನನಿಲ್ದಾಣಗಳಲ್ಲಿ ಇಲಿ ದಳ!

Published:
Updated:

ಲಂಡನ್ (ಪಿಟಿಐ): ಮಾದಕವಸ್ತು ಮತ್ತು ಸ್ಫೋಟಕ ವಸ್ತುಗಳ ಪತ್ತೆಗಾಗಿ ಇನ್ನು ಮುಂದೆ ವಿಮಾನನಿಲ್ದಾಣದಲ್ಲಿ ಇಲಿಗಳು ನೆರವಿಗೆ ಬರಲಿವೆ! ತರಬೇತಿ ಪಡೆದ ಪ್ರಾಣಿಗಳು ದೇಹ ಶೋಧಕ ಸಲಕರಣೆ ಅಥವಾ ಇತರ ಶೋಧ ಕ್ರಮಗಳಿಗಿಂತ ಉತ್ತಮವಾಗಿ ಕಾರ್ಯ ನಿರ್ವಹಿಸಬಲ್ಲುವು ಎಂದು ಇಸ್ರೇಲಿನ ಸಂಶೋಧಕರು ಹೇಳಿದ್ದಾರೆ. ಅಲ್ಲದೆ ಈ ಸಂಶೋಧಕರು ಅಭಿವೃದ್ಧಿಪಡಿಸಿರುವ ಬಾಂಬ್‌ಪತ್ತೆ ಘಟಕದಲ್ಲಿ ಇಲಿ ಕೂಡ ಒಂದು ಭಾಗವಾಗಿದೆ.ಲೋಹ ಶೋಧಕದಂತೆಯೇ ಇರುವ ಈ ಸಾಧನದ ಒಂದು ಬದಿಯಲ್ಲಿ ಮೂರು ಮುಚ್ಚಿದ ನಳಿಕೆಗಳಿದ್ದು ಪ್ರತಿಯೊಂದರಲ್ಲೂ ತರಬೇತಿ ಪಡೆದ ಎಂಟು ಇಲಿಗಳು ಇರುತ್ತವೆ. ನಾಲ್ಕು ತಾಸಿನ ಪಾಳಿಯಲ್ಲಿ ಇವು ಕಾರ್ಯ ನಿರ್ವಹಿಸಲಿದ್ದು ನಳಿಕೆ ಹೊರಗಿನಿಂದ ಪಂಪ್ ಮಾಡುವ ಗಾಳಿಯನ್ನು ಎಳೆದುಕೊಳ್ಳಲಿವೆ. ಸ್ಫೋಟಕ ಅಥವಾ ಮಾದಕ ವಸ್ತು ಪತ್ತೆಯಾದಾಗ ಅವು ನಳಿಕೆಯ ಮತ್ತೊಂದು ಬದಿಗೆ ತೆರಳುತ್ತವೆ. ಅಲ್ಲಿ ಎಚ್ಚರಿಕೆ ಗಂಟೆ ಬಾರಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry