ಗುರುವಾರ , ನವೆಂಬರ್ 21, 2019
21 °C

ಸ್ಫೋಟದಿಂದ ಬಿಜೆಪಿಗೆ ಲಾಭ - ಕಾಂಗ್ರೆಸ್‌

Published:
Updated:

ನವದೆಹಲಿ (ಐಎಎನ್‌ಎಸ್): ಬೆಂಗಳೂರಿನಲ್ಲಿ ಬಿಜೆಪಿ ಕಚೇರಿ ಬಳಿ ಬುಧವಾರ ಸಂಭವಿಸಿರುವ ಸ್ಫೋಟವು ಮುಂದಿನ ತಿಂಗಳು ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲವಾಗಲಿದೆ ಎಂದು ಕಾಂಗ್ರೆಸ್ ಮುಖಂಡ ಶಕೀಲ್ ಅಹಮದ್ ಅವರು ಹೇಳಿದ್ದಾರೆ.ಶಕೀಲ್ ಅವರು ತಮ್ಮ ಟ್ವಿಟರ್ ಪುಟದಲ್ಲಿ `ಬಿಜೆಪಿ ಕಚೇರಿ ಬಳಿ ಸ್ಫೋಟ ಸಂಭವಿಸಿರುವುದರಿಂದ ಇದೊಂದು ಉಗ್ರರ ಕೃತ್ಯ ಎನ್ನಲಾಗುತ್ತದೆ. ಇದರಿಂದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಲಾಭವಾಗುವುದರಲ್ಲಿ ಸಂದೇಹವಿಲ್ಲ' ಎಂದು ಬರೆದಿದ್ದಾರೆ.ಶಕೀಲ್ ಹೇಳಿಕೆಯನ್ನು ಬಿಜೆಪಿ ಖಂಡಿಸಿದ್ದು, ಬಿಜೆಪಿ ವಕ್ತಾರೆ ಮೀನಾಕ್ಷಿ ಲೆಖಿ ಅವರು `ಕಾಂಗ್ರೆಸ್‌ನ ಹಿರಿಯ ಮುಖಂಡರಿಂದ ಬರದಂತಹ ಇಂತಹ ಹೇಳಿಕೆ ಅಂಧಿಕಪ್ರಸಂಗಿತನದಿಂದ ಕೂಡಿದ್ದು, ಕರ್ನಾಟಕದಲ್ಲಿ ಈಗಾಗಲೇ ಪಕ್ಷ (ಕಾಂಗ್ರೆಸ್) ಸೊಲೊಪ್ಪಿಕೊಂಡಿರುವುದನ್ನು ಒಪ್ಪಿಕೊಂಡಿದ್ದೆ' ಎಂದು ಹೇಳಿದರು.ಬೆಂಗಳೂರಿನ ಮಲ್ಲೇಶರಂನಲ್ಲಿರುವ ಬಿಜೆಪಿ ಕಚೇರಿ ಬಳಿ ಬುಧವಾರ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಎಂಟು ಮಂದಿ ಪೊಲೀಸರು ಸೇರಿದಂತೆ ಒಟ್ಟು ಹದಿನಾರು ಜನರು ಗಾಯಗೊಂಡಿದ್ದಾರೆ.

ಪ್ರತಿಕ್ರಿಯಿಸಿ (+)