ಶುಕ್ರವಾರ, ಜನವರಿ 17, 2020
22 °C

ಸ್ಫೋಟ: ಇರಾನ್ ಪರಮಾಣು ವಿಜ್ಞಾನಿ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೆಹರಾನ್ (ಎಎಫ್‌ಪಿ): ಇಲ್ಲಿನ ವಿಶ್ವವಿದ್ಯಾಲಯವೊಂದರ ಹೊರಗಡೆ ಬುಧವಾರ ಸಂಭವಿಸಿದ ಕಾರ್ ಬಾಂಬ್ ಸ್ಫೋಟದಲ್ಲಿ ಇರಾನಿನ ಅಣು ವಿಜ್ಞಾನಿ ಯೊಬ್ಬರು ಅಸುನೀಗಿ, ಇಬ್ಬರು ಗಾಯಗೊಂಡಿದ್ದಾರೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ. ಮೃತ ವಿಜ್ಞಾನಿಯನ್ನು ಮೊಸ್ತಾಫಾ ಅಹಮದಿ ರೋಷನ್ ಎಂದು ಮೂಲಗಳು ಹೇಳಿದ್ದು, ಗಾಯಗೊಂಡಿ ರುವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು  ಹೇಳಿದ್ದಾರೆ.ನೌಕೆಗೆ ಬೆಂಕಿ; ಮೂವರು ಸಾವು


ವೆಲ್ಲಿಂಗ್ಟನ್(ಎಪಿ): ಅಂಟಾರ್ಟಿಕಾ ಬಳಿ ಬುಧವಾರ ಬೆಳಿಗ್ಗೆ ದಕ್ಷಿಣ ಕೊರಿಯಾದ ಮೀನುಗಾರಿಕೆಯ ನೌಕೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮೂವರು ಮೀನುಗಾರರು ಮೃತಪಟ್ಟು, ಇತರ ಇಬ್ಬರಿಗೆ ತೀವ್ರ ಸುಟ್ಟ ಗಾಯಗಳಾಗಿವೆ.ನೌಕೆಯಲ್ಲಿದ್ದ ಸುಮಾರು 37 ಜನರನ್ನು ರಕ್ಷಿಸಲಾಗಿದ್ದು, ಇನ್ನೂ ಹಲವರು ಸಿಕ್ಕಿಹಾಕಿಕೊಂಡಿರುವ ಸಾಧ್ಯತೆ ಇದೆ ಎಂದು ರಕ್ಷಣಾ ಕಾರ್ಯಕ್ಕೆ ತೆರಳಿರುವ ನೌಕೆಯ ಸಿಬ್ಬಂದಿ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)