ಸ್ಫೋಟ ಪ್ರಕರಣದ ಆರೋಪಿ ಉಸ್ಮಾನಿ ಪರಾರಿ

7

ಸ್ಫೋಟ ಪ್ರಕರಣದ ಆರೋಪಿ ಉಸ್ಮಾನಿ ಪರಾರಿ

Published:
Updated:

ಮುಂಬೈ (ಐಎಎನ್‌ಎಸ್‌): ಇಂಡಿ­ಯನ್‌ ಮುಜಾಹಿದೀನ್‌ ಸಂಘಟನೆಯ ಶಂಕಿತ ಸಂಚುಕೋರ ಅಫ್ಜಲ್‌ ಉಸ್ಮಾನಿ­ಯನ್ನು ಶುಕ್ರವಾರ ನ್ಯಾಯಾಲಯಕ್ಕೆ ಕರೆದೊಯ್ಯು­ತ್ತಿ­ದ್ದಾಗ ಪೊಲೀಸರ ಕಣ್ತಪ್ಪಿಸಿ ಪರಾರಿಯಾ­ಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಉಸ್ಮಾನಿ 2008ರಲ್ಲಿ ಸೂರತ್‌ ಮತ್ತು ಅಹಮದಾಬಾದ್‌ ನಗರಗಳಲ್ಲಿ ನಡೆದ  ಸ್ಫೋಟ ಪ್ರಕರಣದಲ್ಲಿ ಭಾಗಿ­ಯಾ­­ಗಿದ್ದ ಆರೋಪವನ್ನು ಎದುರಿಸು­ತ್ತಿದ್ದ.ಪ್ರಕರಣಕ್ಕೆ ಸಂಬಂಧಿಸಿದ ಏಳು ಆರೋಪಿ­ಗಳನ್ನು ರಾಯಗಡ ಜಿಲ್ಲೆಯ ತಲೋಜ ಜೈಲಿನಿಂದ ದಕ್ಷಿಣ ಮುಂಬೈನ ಸೆಷನ್ಸ್‌ ನ್ಯಾಯಾಲಯಕ್ಕೆ ಕರೆತರುವ ವೇಳೆಯಲ್ಲಿ ಘಟನೆ ನಡೆದಿದ್ದು, ಪೊಲೀಸರನ್ನು ಮುಜುಗರ­ಕ್ಕೀಡು ಮಾಡಿದೆ. ಉಸ್ಮಾನಿ ಪತ್ತೆಗೆ ಮುಂಬೈ ಪೊಲೀಸರು  ತಂಡ ರಚಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry