ಶುಕ್ರವಾರ, ಆಗಸ್ಟ್ 23, 2019
21 °C

ಸ್ಫೋಟ: ಮೂವರ ಸಾವು

Published:
Updated:

ಇಸ್ಲಾಮಾಬಾದ್ (ಐಎಎನ್‌ಎಸ್): ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ರೈಲಿನಲ್ಲಿ ಬಾಂಬ್ ಸ್ಫೋಟ ಸಂಭವಿಸಿ ಮೂವರು ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.ಶಾಲಿಮಾರ್ ಎಕ್ಸಪ್ರೆಸ್ ರೈಲಿನಲ್ಲಿ ಮಧ್ಯಾಹ್ನ ಒಂದು ಗಂಟೆಗೆ ಈ ಸ್ಫೋಟ ಸಂಭವಿಸಿದೆ. ತೊಬಾ ತೇಕ್ ಸಿಂಗ್ ಪ್ರದೇಶದ ಚಾಟಿಯಾನಾ ತಲುಪಿದಾಗ ಈ ಘಟನೆ ಜರುಗಿದೆ ಎಂದು ಸುದ್ದಿ ವಾಹಿನಿಗಳು ವರದಿ ಮಾಡಿವೆಸುಮಾರು ಎಂಟು ಕೆ.ಜಿ ತೂಕದ ಸ್ಫೋಟಕ ತುಂಬಿದ್ದ ಬಾಂಬ್ ಅನ್ನು ಬೋಗಿಯೊಂದರ ಶೌಚಾಲಯದಲ್ಲಿ ಇಡಲಾಗಿತ್ತು. ಈ ರೈಲು ಖಾಸಗಿ ಕಂಪೆನಿಗೆ ಸೇರಿದ್ದು, ಅಪರಿಚಿತರಿಂದ ಬೆದರಿಕೆ ಕರೆಗಳು ಬಂದಿದ್ದವು. ಭಾರಿ ಮೊತ್ತದ ಹಣದ ಬೇಡಿಕೆ ಇಟ್ಟಿದ್ದ ಅವರು, ರೈಲು ಸ್ಫೋಟಿಸುವ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

Post Comments (+)