ಭಾನುವಾರ, ಆಗಸ್ಟ್ 25, 2019
21 °C

ಸ್ಫೋಟ: ರಾಜ್ಯಸಭೆ ಖಂಡನೆ

Published:
Updated:

ನವದೆಹಲಿ (ಪಿಟಿಐ): ಬೋಧಗಯಾ ಸರಣಿ ಸ್ಫೋಟ ಹಾಗೂ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ನಾಯಕರ ಮೇಲೆ ನಡೆದ ನಕ್ಸಲೀಯರ ದಾಳಿ ಪ್ರಕರಣಗಳನ್ನು ಖಂಡಿಸುವ ನಿರ್ಣಯವನ್ನು ರಾಜ್ಯಸಭೆ ಸೋಮವಾರ ಕೈಗೊಂಡಿತು.ಬೌದ್ಧರಿಗೆ ಅತಿಪವಿತ್ರವಾದ, ವಿಶ್ವ ಪರಂಪರೆಯ ತಾಣ ಬೋಧಗಯಾ ದೇಗುಲದ ಮೇಲೆ ಜುಲೈ 7ರಂದು ನಡೆದ ದಾಳಿ ಖಂಡನೀಯ. ಜತೆಗೆ 27 ಜನ ಬಲಿ ತೆಗೆದುಕೊಂಡ ಛತ್ತೀಸ್‌ಗಢದ ನಕ್ಸಲ್ ಹತ್ಯಾಕಾಂಡ ಖಂಡನೀಯ ಎಂದ ಸಭಾಪತಿ ಹಮೀದ್ ಅನ್ಸಾರಿ ಈ ಸಂಬಂಧ ನಿರ್ಣಯ ಮಂಡಿಸಿದರು.

Post Comments (+)