ಸ್ಫೋಟ ಸಂಚು: ಮೊರಾಕ್ಕೊ ಪ್ರಜೆ ಬಂಧನ

7

ಸ್ಫೋಟ ಸಂಚು: ಮೊರಾಕ್ಕೊ ಪ್ರಜೆ ಬಂಧನ

Published:
Updated:

ವಾಷಿಂಗ್ಟನ್ (ಪಿಟಿಐ): ಅಮೆರಿಕ ಕಾಂಗ್ರೆಸ್, ಸುಪ್ರೀಂ ಕೋರ್ಟ್, ರಾಷ್ಟ್ರೀಯ ಗ್ರಂಥಾಲಯ ಮತ್ತಿತರ ಉನ್ನತ ಮಟ್ಟದ ಕಚೇರಿಗಳಿರುವ ಇಲ್ಲಿನ ಕ್ಯಾಪಿಟಲ್ ಹಿಲ್ ಪ್ರದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ ಆರೋಪದಲ್ಲಿಮೊರಾಕ್ಕೊ ಪ್ರಜೆಯನ್ನು ಶುಕ್ರವಾರ ನಡೆಸಲಾದ ಮಾರುವೇಷದ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ.ಅಲ್-ಖೈದಾ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ ಎನ್ನಲಾದ ಯುವಕ ಅಮಿನ್ ಎಲ್ ಖಲಿಫಿಯನ್ನು ಕಾಂಗ್ರೆಸ್ ಸದಸ್ಯರ ಕಾರುಗಳ ನಿಲುಗಡೆಗೆ ಮೀಸಲಿದ್ದ ಸ್ಥಳದಲ್ಲಿ ಅಮೆರಿಕದ ಕೇಂದ್ರ ತನಿಖಾ ದಳ (ಎಫ್‌ಬಿಐ) ಬಂಧಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry