ಸೋಮವಾರ, ಅಕ್ಟೋಬರ್ 21, 2019
24 °C

ಸ್ಫೋಟ; 12 ಮಂದಿ ಬಲಿ

Published:
Updated:

ಬಾಗ್ದಾದ್ (ಐಎಎನ್‌ಎಸ್): ಸ್ಫೋಟಗಳನ್ನು ತುಂಬಿದ್ದ ಎರಡು ಕಾರ್‌ಗಳನ್ನು ಉಗ್ರರು ಸ್ಫೋಟಿಸಿದ ಪರಿಣಾಮ ಸುಮಾರು 12 ಮಂದಿ ಸತ್ತು, 50 ಜನರು ಗಾಯಗೊಂಡಿರುವ ಘಟನೆ ಬಾಗ್ದಾದ್‌ನಲ್ಲಿ ಸೋಮವಾರ ಸಂಭವಿಸಿದೆ.ಮೊದಲ ಸ್ಫೋಟ ಅಲ್ ಮುವಾಸಾಲ್ಟ್ ಜಿಲ್ಲೆಯ ಶಿಯಾ ಮಸೀದಿ ಬಳಿ, ಎರಡನೇ ಸ್ಫೋಟ ಶಾಬ್ ಜಿಲ್ಲೆಯಲ್ಲಿ ಸಂಭವಿಸಿದೆ ಎಂದು ಅಧಿಕೃತ ಮೂಲಗಳು ಹೇಳಿವೆ. ಸಂಸತ್ ಬಳಿ ನಡೆದ ಸ್ಫೋಟಕ್ಕೆ ಅಲ್‌ಖೈದಾ ಹೊಣೆ ಹೊತ್ತುಕೊಂಡಿದೆ. ಇರಾಕ್‌ನ ಸಂಸತ್ ಬಳಿ ಕಳೆದ ನವೆಂಬರ್‌ನಲ್ಲಿ ಬಾಂಬ್ ಸ್ಫೋಟಿಸಿದ್ದು ತಾನೆಂದು ಅಲ್‌ಖೈದಾ ಹೇಳಿದ್ದು, ಪ್ರಧಾನಿ ನೂರಿ ಅಲ್-ಮಲ್ಲಿಕಿ ಮತ್ತು ಸಂಸದರನ್ನು ಗುರಿಯಾಗಿ ಈ ದಾಳಿ ನಡೆಸಲಾಯಿತು ಎಂದು ಹೇಳಿದೆ.

 

Post Comments (+)