ಸ್ಮರಣ ಶಕ್ತಿ ಉಪನ್ಯಾಸ

7

ಸ್ಮರಣ ಶಕ್ತಿ ಉಪನ್ಯಾಸ

Published:
Updated:

ಇದು ಪರೀಕ್ಷೆಗಳ ಪರ್ವಕಾಲ. ಫೆಬ್ರುವರಿ ಕಳೆದು ಮಾರ್ಚ್ ಬಂತೆಂದರೆ ಸಾಕು, ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ ಅವರ ಪಾಲಕರಿಗೂ ಒತ್ತಡ. ಮಗ ಸರಿಯಾಗಿ ಓದುತ್ತಿಲ್ಲ ಅಥವಾ ಓದಿದ್ದನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದಿಲ್ಲ ಎನ್ನುವ ಆತಂಕ.ಈ ಸಮಸ್ಯೆಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮೈಂಡ್ ಡೈನಾಮಿಕ್ಸ್ ಸಂಸ್ಥೆ ಪ್ರಯತ್ನಿಸುತ್ತಿದೆ. ಮಕ್ಕಳ ಸ್ಮರಣ ಶಕ್ತಿಯನ್ನು ಒರೆಗೆ ಹಚ್ಚುವ, ಓದಿದ್ದನ್ನು ಮರೆಯದಂಥ ತಂತ್ರಗಾರಿಕೆಯನ್ನು ಹೇಳಿಕೊಡುತ್ತದೆ.

 

ಈ ನಿಟ್ಟಿನಲ್ಲಿ ಮಕ್ಕಳಿಗೆ  ಸಹಾಯ ಮಾಡಲು ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿದೆ.ಮಕ್ಕಳೊಂದಿಗೆ ಸದಾ ಇರುವ ಪಾಲಕರಿಗೂ, ಶಾಲೆಯಲ್ಲಿಯೂ ಈ ತಂತ್ರಗಳನ್ನು ಅಳವಡಿಸಲು ಅನುಕೂಲವಾಗುವಂತೆ ಶಿಕ್ಷಕರಿಗೂ ಉಚಿತ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.  ಶನಿವಾರ (ಫೆ.25) ಸಂಸ್ಥೆಯ ಸಂಸ್ಥಾಪಕ ಕೃಷ್ಣ ಉಪನ್ಯಾಸ ನೀಡಲಿದ್ದಾರೆ.  ಸ್ಥಳ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮೈಂಡ್ ಡೈನಾಮಿಕ್ಸ್, ನಂ 49- 50, 50ಅಡಿ ರಸ್ತೆ, 2ನೇ ಮಹಡಿ, ಎಸ್‌ಜಿಎಸ್ ಆರ್ಕೇಡ್, ನಿರ್ಮಲಾ ಬಸ್ ನಿಲ್ದಾಣ ಹತ್ತಿರ, ಹನುಮಂತನಗರ. ಸಂಜೆ 5.30. ಮಾಹಿತಿಗೆ: 98867 03172 / 95389 97462ಭಾರತದಲ್ಲಿ ಗ್ರಾಮೀಣ ಪ್ರವಾಸೋದ್ಯಮ...ಎಸ್.ನಿಜಲಿಂಗಪ್ಪ ಕಾಲೇಜಿನ ಪ್ರವಾಸೋದ್ಯಮ ವಿಭಾಗ: ಶನಿವಾರ `ಭಾರತದಲ್ಲಿ ಗ್ರಾಮೀಣ ಪ್ರವಾಸೋದ್ಯಮ-ಅವಕಾಶಗಳು ಮತ್ತು ಸವಾಲುಗಳು~ ಕುರಿತು ವಿಚಾರ ಸಂಕಿರಣ. ಉದ್ಘಾಟನೆ: ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಕೆ.ವಿಶ್ವನಾಥ ರೆಡ್ಡಿ.ಅತಿಥಿಗಳು: ಸಿಎಂಆರ್ ತಾಂತ್ರಿಕ ಸಂಸ್ಥೆ ಅಧ್ಯಕ್ಷ ಪ್ರೊ.ಬೋರ್‌ನಾಥ್ ದತ್ತ, ಕೆಎಲ್‌ಇ ಕಾನೂನು ವಿದ್ಯಾಲಯದ ಪ್ರಾಚಾರ್ಯ ಡಾ.ಜೆ.ಎಂ.ಮಲ್ಲಿಕಾರ್ಜುನಯ್ಯ, ಸಿಟಾಡೆಲ್ ಹೋಟೆಲ್ ವ್ಯವಸ್ಥಾಪಕ ನಿರ್ದೇಶಕ ಉಪೆನ್ ಆನಂದ್. ಸಮಾರೋಪ ಸಮಾರಂಭಉದ್ಘಾಟನೆ: ಬೆಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಅಧ್ಯಕ್ಷ ಡಾ.ರಾಮಚಂದ್ರ ಗೌಡ.ಸ್ಥಳ: ನವರಂಗ್ ಟಾಕೀಸ್ ಹಿಂಭಾಗ, ರಾಜಾಜಿನಗರ 2ನೇ ಬ್ಲಾಕ್. ಬೆಳಿಗ್ಗೆ 10.

ಮಾಹಿತಿಗೆ: 23429782

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry