`ಸ್ಮಶಾನವೂ ಅವ್ಯವಸ್ಥೆಯ ಗೂಡು'

7

`ಸ್ಮಶಾನವೂ ಅವ್ಯವಸ್ಥೆಯ ಗೂಡು'

Published:
Updated:

ಕೃಷ್ಣರಾಜಪುರ: `ಕ್ಷೇತ್ರ ವ್ಯಾಪ್ತಿಯಲ್ಲಿರುವ ಬೆರಳೆಣಿಕೆಯಷ್ಟು ಸರ್ಕಾರಿ ಸ್ಮಶಾನಗಳಲ್ಲಿ ಯರ‌್ರಯ್ಯನಪಾಳ್ಯದ ಸ್ಮಶಾನವೂ ಅವ್ಯವಸ್ಥೆಯ ಗೂಡಾಗಿದೆ' ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

`ಚರಂಡಿಯ ನೀರು ಸ್ಮಶಾನದ ಆವರಣದಲ್ಲಿ ಹರಿಯುತ್ತಿದ್ದು, ಮಳೆಗಾಲದಲ್ಲಿ ಸ್ಮಶಾನ ಕೆಸರಿನ ಗದ್ದೆಯಾಗುತ್ತಿದೆ. ಇದರ ಸುತ್ತವೇ ತ್ಯಾಜ್ಯದ ರಾಶಿಯನ್ನು ಸುರಿಯಲಾಗುತ್ತಿರುವುದರಿಂದ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ' ಎಂದು ನಿವಾಸಿ ನರೇಂದ್ರ ದೂರಿದರು.

`ಈ ಭಾಗದಲ್ಲಿ ಸಮರ್ಪಕ ಕುಡಿಯುವ ನೀರಿನ ಸೌಲಭ್ಯವಿಲ್ಲ. ಸ್ಮಶಾನ ತಗ್ಗು- ದಿಣ್ಣೆಗಳಿಂದ ಕೂಡಿದ್ದು ಗುಂಡಿ ತೆಗೆಯಲು ಹರಸಾಹಸ ಪಡಬೇಕಾಗಿದೆ. ತ್ಯಾಜ್ಯ ಸಂಗ್ರಹದಿಂದ ಕೆಟ್ಟ ವಾಸನೆ ಹಬ್ಬಿದ್ದು, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈಗಾಗಲೇ ಬಿಬಿಎಂಪಿ ಅಧಿಕಾರಿಗಳಿಗೆ ದೂರು ನೀಡಿದ್ದರೂ ಸ್ಮಶಾನದ ಅಭಿವೃದ್ಧಿಗೆ ಕ್ರಮ ಕೈಗೊಂಡಿಲ್ಲ' ಎಂದು ಇನ್ನೊಬ್ಬ ನಿವಾಸಿ ಮಹೇಶ್ ಅಳಲು ತೋಡಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry