`ಸ್ಮಶಾನ ಜಾಗ ಕೊಳಚೆ ಪ್ರದೇಶ ಘೋಷಣೆ ಕಷ್ಟ'

ಸೋಮವಾರ, ಜೂಲೈ 22, 2019
27 °C

`ಸ್ಮಶಾನ ಜಾಗ ಕೊಳಚೆ ಪ್ರದೇಶ ಘೋಷಣೆ ಕಷ್ಟ'

Published:
Updated:

ಸಿಂದಗಿ: ವಿದ್ಯಾನಗರ ಬಡಾವಣೆ ಹಿಂದೆ ಇರುವ ಎಂಟು ಎಕರೆ ಸ್ಮಶಾನ ಜಾಗವನ್ನು `ಕೊಳಚೆ ಪ್ರದೇಶ' ಎಂದು ಘೋಷಣೆ ಮಾಡುವಂತೆ ಅಲ್ಲಿನ ನಿವಾಸಿಗಳು ಆಗ್ರಹಿಸಿರುವುದು ನ್ಯಾಯೋಚಿತ ಎನಿಸಿದರೂ ಈ ಪ್ರದೇಶವನ್ನು ಕೊಳಚೆ ಪ್ರದೇಶ ಎಂದು ಘೋಷಣೆ ಮಾಡುವುದಕ್ಕೆ ಸಾಕಷ್ಟು ಕಾನೂನು ತೊಡಕುಗಳಿವೆ ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಗಂಗೂಬಾಯಿ ಮಾನಕರ ಹೇಳಿದರು.ಭಾನುವಾರ ಸಂಜೆ ನಗರದ ವಿದ್ಯಾ ನಗರ ಬಡಾವಣೆಯಲ್ಲಿನ ಜೋಪಡ ಪಟ್ಟಿ ಪ್ರದೇಶಕ್ಕೆ ಹಠಾತ್‌ನೆ ಭೇಟಿ ನೀಡಿದ ಮಾನಕರ ಅವರು ಪ್ರತಿ ಮನೆ, ಮನೆಗೂ ತೆರಳಿ ವಾಸ್ತವ ಹೇಳಿಕೆ ಗಳನ್ನು ಸಂಗ್ರಹಿಸಿಕೊಂಡರು.ನಂತರ ಮಾತನಾಡಿದ ಅವರು ಈಗ ನಿಷ್ಪಕ್ಷಪಾತ ಸಮೀಕ್ಷೆಯನ್ನು ಆಧರಿಸಿ ಇಲ್ಲಿ ವಾಸಿಸುವ ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡ ಲಾಗುವುದು ಎಂದರು.ಬೇರೆ, ಬೇರೆ ಹಳ್ಳಿಗಳಿಂದ ಬಂದು ಇದೇ ಸ್ಮಶಾನ ಜಾಗದಲ್ಲಿ ಜೋಪಡ ಪಟ್ಟಿ ನಿರ್ಮಿಸಿ ನೆಲೆಸಿದ್ದಾರೆ. ನಿವೇಶನ ಅತಿಕ್ರಮಣ ಮಾಡಿಕೊಂಡವರಲ್ಲಿ ಉಳ್ಳವರು, ಇಲ್ಲದವರೂ ಇದ್ದಾರೆ. ಹೀಗಾಗಿ ಸಂಗ್ರಹಿಸಿರುವ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವುದಾಗಿ ತಿಳಿಸಿದರು.400ಕ್ಕೂ ಅಧಿಕ ಜನ ವಾಸ ವಾಗಿರುವ ಸ್ಮಶಾನ ಜಾಗವನ್ನು ತೆರುವುಗೊಳಿಸಿದರೆ ಅರ್ಹ ಫಲಾನು ಭವಿಗಳಿಗೆ ಬೇರೆಡೆ ಆಶ್ರಯ ಯೋಜನೆ ಯಡಿ ನಿವೇಶನ ನೀಡುವ ವ್ಯವಸ್ಥೆ ಕಲ್ಪಿಸಿ ಕೊಡಲಾಗುವುದು ಎಂದು ಗಂಗೂಬಾಯಿ ಮಾನಕರ ಹೇಳಿದರು.ಪುರಸಭೆ ಮುಖ್ಯಾಧಿಕಾರಿ ಎನ್. ಆರ್. ಮಠ,ಸದಸ್ಯ ಹಣಮಂತ ಸುಣ ಗಾರ, ಚಂದ್ರಶೇಖರ ಅಮಲಿಹಾಳ, ಅರುಣ ವಿಧಾತೆ, ದಲಿತ ಬಹುಜನ ಚಳುವಳಿ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಗುಬ್ಬೇವಾಡ, ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ನಗರ ಘಟಕ ಅಧ್ಯಕ್ಷ ಸಾಹೇ ಬಣ್ಣ ಪುರದಾಳ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry