ಭಾನುವಾರ, ಮೇ 9, 2021
28 °C

ಸ್ಮಶಾನ ವಿವಾದ: ತಹಶೀಲ್ದಾರರಿಂದ ಸಮೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೋಣ: ತಾಲ್ಲೂಕಿನ ಶಾಂತಗೇರಿ ಗ್ರಾಮದಲ್ಲಿ ಸೋಮವಾರ ದಲಿತ ಮಹಿಳೆಯ ಅಂತ್ಯಕ್ರಿಯೆ ವಿಚಾರದಲ್ಲಿ ಹಟ್ಟಿಮನಿ ಕುಟುಂಬ ಮತ್ತು ದಲಿತರ ನಡುವೆ ವಾಗ್ವಾದ ನಡೆದು ಪೊಲೀಸ್ ರಕ್ಷಣೆಯಲ್ಲಿ ಅಂತ್ಯಕ್ರಿಯೆ ನಡೆಯಿತು. ಈ ಹಿನ್ನೆಲೆಯಲ್ಲಿ ಬುಧವಾರ ಸ್ಥಳಕ್ಕೆ ತಹಶೀಲ್ದಾರ್ ಎಂ.ಬಿ.ಪಾಟೀಲ ಮತ್ತು ತಾಪಂ ಅಧಿಕಾರಿ ಎಸ್.ಎಂ. ರುದ್ರಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.ದಲಿತ ಮುಖಂಡರು ಬುಧವಾರ ತಹಶೀಲ್ದಾರ್ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದ ಹಿನ್ನೆಲೆಯಲ್ಲಿ ತಹಶೀಲ್ದಾರರು ಸ್ಥಳಕ್ಕೆ ಆಗಮಿಸಿದ್ದರು.ಕೆಲ ವರ್ಷಗಳಿಂದ ದಲಿತರು ಕೇರಿಯ ಪಕ್ಕದಲ್ಲಿರುವ ಜಮೀನಿನಲ್ಲಿ ಅಂತ್ಯಕ್ರಿಯೆಯನ್ನು ನಡೆಸುತ್ತಿದ್ದು ಈಗ 3 ವರ್ಷಗಳಿಂದ ಸ್ಮಶಾನಕ್ಕೆ ಹೊಗುವ ದಾರಿಯನ್ನು ಬಂದ್ ಮಾಡಿ ಹಟ್ಟಿಮನಿ ಕುಟುಂಬದವರು ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡು ಶವ ತೆಗೆದುಕೊಂಡು ಹೋಗುತ್ತಿಲ್ಲ. ಇದನ್ನು ಸರಿಪಡಿಸಬೇಕು ಎಂದು ದಲಿತರು ಆಗ್ರಹಿಸಿದರು.ಈ ಸಂದರ್ಭದಲ್ಲಿ ದಲಿತರ ಮತ್ತು ಹಟ್ಟಿಮನಿ ಬಂಧುಗಳ ನಡುವೆ ಕೆಲ ಕ್ಷಣ ಮಾತಿನ ಚಕಮಕಿ ನಡೆದಾಗ ಪೊಲೀಸರು ಮಧ್ಯ ಪ್ರವೇಶಿಸಿ ವಾತವರಣ ತಿಳಿಗೊಳಿಸಿದರು.ತಹಶೀಲ್ದಾರರು ತಾ.ಪಂ. ಅಧಿಕಾರಿ ಎಸ್.ಎಂ.ರುದ್ರಸ್ವಾಮಿ, ಪಿಡಿಒ ಮತ್ತು ಪಂಚಾಯ್ತಿ ಸಿಬ್ಬಂದಿಯನ್ನು ಕರೆಸಿ ಗುರುವಾರ ಬೆಳಿಗ್ಗೆ ಸ್ಮಶಾನಕ್ಕೆ ಹೋಗುವ ದಾರಿಯನ್ನು ಸ್ವಚ್ಛಗೊಳಿಸಬೇಕು ಎಂದು ಆದೇಶಿಸಿದರು.ಶಾಂತಿ ಸಭೆ: ದಲಿತ ಕಾಲೊನಿಯ ದೇವಸ್ಥಾನದಲ್ಲಿ ಶಾಂತಿ ಸಭೆ ನಡೆಸಿದ ತಹಶೀಲ್ದಾರರು, ಗ್ರಾಮದಲ್ಲಿ ಈ ರೀತಿ ಆಗುವುದು ತರವಲ್ಲ. ಎಲ್ಲರೂ ಸಹೋದರರಂತೆ ಜಿವನ ನಡೆಸುವುದು ಅವಶ್ಯ ಎಂದರು.ಪ್ರಕಾಶ ಹೊಸಳ್ಳಿ, ಪರಶುರಾಮ ಮಾದರ, ಪರಸಪ್ಪ ಪೂಜಾರ, ಮರಿಯಪ್ಪ ಹಲಗಿ, ನೀಲಪ್ಪ ಮಾದರ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.