ಗುರುವಾರ , ಅಕ್ಟೋಬರ್ 17, 2019
27 °C

ಸ್ಮಾರ್ಟ್‌ಫೋನ್

Published:
Updated:

ಸ್ಮಾರ್ಟ್‌ಫೋನ್ ಎಂದರೇನು?

ಸ್ಮಾರ್ಟ್‌ಫೋನ್ (smartphone) ಅರ್ಥಾತ್ ಚತುರವಾಣಿ ಎಂದರೆ ಮೊಬೈಲ್ ಫೋನಿನ ಕೆಲಸಗಳನ್ನೂ ಮಾಡಬಲ್ಲ ಕಿಸೆಗಣಕ. ಈ ಫೋನುಗಳಲ್ಲಿ ಅಂತರಜಾಲ ನೋಡುವುದು, ಇಮೈಲ್ ಮಾಡುವುದು, ಪದಸಂಸ್ಕರಣೆ, ಜಿಪಿಎಸ್ ಬಳಸಿ ತಾನು ಇರುವ ಸ್ಥಾನ ತಿಳಿಯುವುದು, ಇನ್ನೂ ಏನೇನೋ ಮಾಡಬಹುದು.ಇತ್ತೀಚೆಗೆ ಇಂತಹ ಫೋನುಗಳು ಅಗ್ಗವಾಗುತ್ತ ಜನಸಾಮಾನ್ಯರ ಕೈಗೆಟುಕುವಂತಾಗುತ್ತಿವೆ. ಇಂತಹ ಫೋನುಗಳಿಗೆ ಸಹಸ್ರಾರು ತಂತ್ರಾಂಶಗಳು ಅಂತರಜಾಲದಲ್ಲಿ ಲಭ್ಯವಿವೆ.ಇವುಗಳು ಕೆಲಸ ಮಾಡಲು ಆಂಡ್ರೋಯಿಡ್, ವಿಂಡೋಸ್ ಫೋನ್, ಐಓಎಸ್, ಇತ್ಯಾದಿ ಯಾವುದಾದರು ಒಂದು ಕಾರ್ಯಾಚರಣೆಯ ವ್ಯವಸ್ಥೆ ಅಗತ್ಯ. ಯಾಕೋ ಏನೋ ಸಿಂಬಿಯನ್ ಫೋನ್‌ಗಳು ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಅಷ್ಟು ಯಶಸ್ಸು ಕಂಡಿಲ್ಲ.ಎನ್‌ಎಫ್‌ಸಿ

ಸಮೀಪ ಕ್ಷೇತ್ರ ಸಂವಹನ (NFC - Near Field Communication)  ಅತಿ ಸಮೀಪದಲ್ಲಿರುವ ವಿದ್ಯುನ್ಮಾನ ಉಪಕರಣಗಳ ನಡುವೆ ನಡೆಯುವ ಸಂವಹನ. 4 ಸೆಂ.ಮೀ. ಅಥವಾ ಅದಕ್ಕಿಂತಲೂ ಕಡಿಮೆ ವ್ಯಾಪ್ತಿಯಲ್ಲಿ ನಡೆಯುವ ನಿಸ್ತಂತು (ವಯರ್‌ಲೆಸ್) ಸಂವಹನ.

 

ಇದು ಬಹುಮಟ್ಟಿಗೆ ಬ್ಲೂಟೂತ್ ಮಾದರಿಯಲ್ಲಿ ಕೆಲಸ ಮಾಡುತ್ತದೆ. ಆದರೆ ಇದರ ತರಂಗಾಂತರ, ಶಕ್ತಿ ಮತ್ತು ವ್ಯಾಪ್ತಿಗಳು ಕಡಿಮೆ. ಪ್ರಮುಖವಾಗಿ ಮೊಬೈಲ್ ದೂರವಾಣಿಗಳಲ್ಲಿ ಇವುಗಳ ಬಳಕೆ.

 

ಇದನ್ನು ವ್ಯಾಪಾರ ವ್ಯವಹಾರಗಳಲ್ಲಿ ಬಹುಮಟ್ಟಿಗೆ ಬಳಸುತ್ತಾರೆ. ಅಂಗಡಿಯಲ್ಲಿ ಸಾಮಾನು ಕೊಂಡುಕೊಂಡು ಕೊನೆಗೆ ಹಣ ಪಾವತಿ ಮಾಡಬೇಕಾದಾಗ ನಗದುಕಟ್ಟೆಯಲ್ಲಿರುವ ಸಂವೇದಕದ ಮುಂದೆ ಎನ್‌ಎಫ್‌ಸಿ ತಂತ್ರಜ್ಞಾನ ಅಳವಡಿಸಿರುವ ಮೊಬೈಲ್ ಫೋನ್ ಹಿಡಿದರೆ ಸಾಕು. ನಿಮ್ಮ ಖಾತೆಯಿಂದ ಅಂಗಡಿಯಾತನ ಖಾತೆಗೆ ಹಣ ವರ್ಗಾವಣೆಯಾಗುತ್ತದೆ. ಈ ತಂತ್ರಜ್ಞಾನ ಇನ್ನೂ ಬಳಕೆಗೆ ಬರಬೇಕಷ್ಟೆ.

Post Comments (+)