ಸ್ಮಾರ್ಟ್‌ಫೋನ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಪ್ರಶ್ನೆಪತ್ರಿಕೆ!

ಮಂಗಳವಾರ, ಮೇ 21, 2019
24 °C

ಸ್ಮಾರ್ಟ್‌ಫೋನ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಪ್ರಶ್ನೆಪತ್ರಿಕೆ!

Published:
Updated:

ಕೆನಡಾ ಮೂಲದ `ಬ್ಲ್ಯಾಕ್‌ಬೆರಿ~ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆ `ರಿಸರ್ಚ್ ಇನ್ ಮೋಷನ್~ (ರಿಮ್) ಮತ್ತು ದೂರವಾಣಿ ಸೇವಾ ಸಂಸ್ಥೆ `ವೊಡಾಫೋನ್~ ಇತ್ತೀಚೆಗೆ ಜಂಟಿ ಒಪ್ಪಂದವೊಂದಕ್ಕೆ ಸಹಿ ಹಾಕಿವೆ.ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಪ್ರಶ್ನೆ-ಉತ್ತರಗಳನ್ನು ಮೊಬೈಲ್ ಮೂಲಕ ನೀಡುವುದು ಈ ಒಪ್ಪಂದದ ಆಶಯ. ಇದಕ್ಕೆ ಸಂಬಂಧಿಸಿದ ಪಠ್ಯವನ್ನು ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್(ಐಎಂಎಸ್) ಸಂಸ್ಥೆ ಒದಗಿಸಲಿದೆ.ಬ್ಲ್ಯಾಕ್‌ಬೆರಿ ಸ್ಮಾರ್ಟ್‌ಫೋನ್‌ನಲ್ಲಿ ವೊಡಾಫೋನ್ ಸಂಪರ್ಕ ಸೇವೆ ಬಳಸುವ ಗ್ರಾಹಕರಿಗೆ ಮಾತ್ರ ಉಚಿತವಾಗಿ ಈ ಸೇವೆ ಲಭಿಸಲಿದೆ. ಇದಕ್ಕಾಗಿ ಚಂದಾದಾರರು ತಮ್ಮ ಮೊಬೈಲ್‌ಗೆ `ಬ್ಲಾಕ್‌ಬೆರಿ ಸ್ಟಡಿ ಬಡ್ಡಿ~ ಎಂಬ ಅಪ್ಲಿಕೇಷನ್ ಅನುಸ್ಥಾಪಿಸಿಕೊಳ್ಳಬೇಕು.

 

ಆ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧಗೊಳ್ಳಬಹುದು. ಜತೆಗೆ ಪ್ರಶ್ನೆ-ಉತ್ತರಗಳು ಮತ್ತು ಮಾಹಿತಿ ತುಣುಕು ಅಂಗೈಯಲ್ಲೇ ಲಭ್ಯವಾಗಲಿವೆ ಎನ್ನುತ್ತಾರೆ `ರಿಮ್~ನ  ಮಾರುಕಟ್ಟೆ ನಿರ್ದೇಶಕ ಹಿತೇಶ್ ಷಾ. ಪುಣೆ ಮೂಲದ `ಓಮ್ನಿ ಬ್ರಿಡ್ಜ್ ಟೆಕ್ನಾಲಜಿ~ ಎನ್ನುವ ಸಂಸ್ಥೆ `ಸ್ಟಡಿ ಬಡ್ಡಿ~ ಅಪ್ಲಿಕೇಷನ್ ಅಭಿವೃದ್ಧಿಪಡಿಸಿದೆ. ಬ್ಲ್ಯಾಕ್ ಬೆರಿ ಆ್ಯಪ್ ವರ್ಲ್ಡ್ ಮೂಲಕ ಇದನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈಗಾಗಲೇ 5 ಸಾವಿರ ಪ್ರಶ್ನೆಗಳು ವೊಡಾಫೋನ್ ಬಳಕೆದಾರರಿಗೆ ಉಚಿತ ಡೌನ್‌ಲೋಡ್‌ಗೆ ಲಭ್ಯವಿವೆ.ಸಾಮಾನ್ಯ ಪ್ರವೇಶ ಪರೀಕ್ಷೆ (ಕಾಮನ್ ಅಡ್ಮಿಷನ್ ಟೆಸ್ಟ್-ಸಿಎಟಿ)  ಮತ್ತು ಮ್ಯಾನೇಜ್‌ಮೆಂಟ್ ಕೋರ್ಸ್ ಪ್ರವೇಶ ಪರೀಕ್ಷೆಗಳಿಗೆ (ಸಿಎಂಎಟಿ)  ಸಿದ್ಧತೆ ನಡೆಸುತ್ತಿರುವ 2 ಲಕ್ಷ ವಿದ್ಯಾರ್ಥಿಗಳಿಗೆ ಈ ಅಪ್ಲಿಕೇಷನ್ ನೆರವು ನೀಡಲಿದೆ.ಆಯ್ದ ಕೆಲವು ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಕೂಡ ಲಭ್ಯವಿದೆ~ ಎನ್ನುತ್ತಾರೆ `ಐಎಂಎಸ್~ನ ಕೇರಳ ಮತ್ತು ತಮಿಳುನಾಡು ವ್ಯವಹಾರಗಳ ಮುಖ್ಯಸ್ಥ ಸರಿತ್ ನಾಯರ್.ತಮಿಳುನಾಡಿನಲ್ಲಿ ಈಗಾಗಲೇ 1.25 ಲಕ್ಷ ಗ್ರಾಹಕರು ಈ ಸೇವೆಗಾಗಿ ನೋಂದಾಯಿಸಿಕೊಂಡಿದ್ದಾರೆ. ಸದ್ಯ ಈ ಸೇವೆ ತಮಿಳುನಾಡಿನಲ್ಲಿ ಮಾತ್ರ ಲಭ್ಯವಿದೆ. ಶೀಘ್ರದಲ್ಲೇ ಉಳಿದ ರಾಜ್ಯಗಳಿಗೂ ವಿಸ್ತರಿಸುವ ಕುರಿತು ವೊಡಾಫೋನ್ ಚಿಂತಿಸುತ್ತಿದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry